ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟಿದ್ದೇನು?

2018ನೇ ವರ್ಷದ ಅಂತ್ಯಕ್ಕೆ ನಾವು ಸಮೀಪಿಸುರುವಂತೆಯೇ ಅತ್ತ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್‌ 2018ನೇ ವರ್ಷದಲ್ಲಿ ಭಾರತದಲ್ಲಿ ಅತೀ ಹೆಚ್ಚು ಶೋಧಿಸಲ್ಪಟ್ಟ ವಿಚಾರಗಳ ಪಟ್ಟಿ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2018ನೇ ವರ್ಷದ ಅಂತ್ಯಕ್ಕೆ ನಾವು ಸಮೀಪಿಸುರುವಂತೆಯೇ ಅತ್ತ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್‌ 2018ನೇ ವರ್ಷದಲ್ಲಿ ಭಾರತದಲ್ಲಿ ಅತೀ ಹೆಚ್ಚು ಶೋಧಿಸಲ್ಪಟ್ಟ ವಿಚಾರಗಳ ಪಟ್ಟಿ ಬಿಡುಗಡೆ ಮಾಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ, ಸುದ್ದಿ, ಕ್ರೀಡೆ, ರಾಜಕೀಯ, ಮಾಧ್ಯಮ ಹಾಗೂ ಮನರಂಜನೆ ವಿಭಾಗಗಳಲ್ಲಿ ಅತಿ ಹೆಚ್ಚು ಹುಡುಕಾಟ ಕಂಡುಬಂದಿದೆ. ಗೂಗಲ್ ಬಿಡುಗಡೆ ಮಾಡಿರುವ 2018ನೇ ಸಾಲಿನ ಟ್ರೆಂಡಿಂಗ್ ಪಟ್ಟಿಯಲ್ಲಿ ಫೀಫಾ ವಿಶ್ವಕಪ್ ಅಗ್ರ ಸ್ಥಾನದಲ್ಲಿದ್ದು, ಐಪಿಎಲ್ 2ನೇ ಸ್ಥಾನದಲ್ಲಿದೆ. ಇನ್ನು ಇದೇ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ನಾಲ್ಕನೇ ಸ್ಖಾನದಲ್ಲಿದೆ. ಮನರಂಜನೆ ವಿಭಾಗದಲ್ಲಿ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಅತೀ ಹೆಚ್ಚು ಶೋಧಿಸಲ್ಪಟ್ಟ ವಿಚಾರವಾಗಿದ್ದು, ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ 7ನೇ ಸ್ಥಾನದಲ್ಲಿದೆ.
ಉಳಿದಂತೆ ಅತಿ ಹೆಚ್ಚು ಶೋಧಿಸಲ್ಪಟ್ಟ ಚಲನಚಿತ್ರ: ರೋಬೋಟ್ 2.0 ಆಗಿದ್ದು, ವಾಟ್ ಈಸ್ ವಿಭಾಗದಲ್ಲಿ ವಾಟ್ ಈಸ್ ಸೆಕ್ಷನ್ 377 (ಸಲಿಂಗ ಕಾಮ) ವಿಚಾರ ಅತೀ ಹೆಚ್ಚು ಬಾರಿ ಶೋಧಿಸಲ್ಪಟ್ಟಿದೆ. ಇನ್ನು ನಿಯರ್ ಮಿ ವಿಭಾಗದಲ್ಲಿ ಮೊಬೈಲ್ ಸ್ಟೋರ್ಸ್ ನಿಯರ್ ಮಿ ಅತೀ ಹೆಚ್ಚು ಬಾರಿ ಶೋಧಿಸಲ್ಪಟ್ಟಿದೆ. ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಶೋಧಿಸಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಗ್ರ ಸ್ಥಾನದಲ್ಲಿದ್ದು, ಹರ್ಯಾಣದ ಖ್ಯಾತ ಗಾಯಕಿ ಸಪ್ನಾ ಚೌದರಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದು, ಇತ್ತೀಚೆಗೆ ನಿಕ್ ಜೋನಾಸ್ ರೊಂದಿಗಿನ ವಿವಾಹದ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಹೆಚ್ಚು ಬಾರಿ ಟ್ರೆಂಡಿಂಗ್ ಆಗಿತ್ತು.
ಗೂಗಲ್ ಪಟ್ಟಿ ಮಾಡಿರುವ ಟಾಪ್ ವಿಷಯಗಳು
1. ಫಿಫಾ ವಿಶ್ವಕಪ್2018
2. ಲೈವ್ ಸ್ಕೋರ್,
3. ಐಪಿಎಲ್ 2018
4. ಕರ್ನಾಟಕ ಚುನಾವಣಾ ಫಲಿತಾಂಶ
5. ಬಾಲ್ ವೀರ್,
6. ಬೀಗ್ ಬಾಸ್,
7. ರೋಬೋಟ್ 2.0
8. ಏಷ್ಯಾ ಕಪ್ 2018
9. ಮೋಟು ಪತ್ಲು
10. ಏಷ್ಯನ್ ಗೇಮ್ಸ್ 2018 
ಟಾಪ್ 10 'ಹೌ ಟು' ಪಟ್ಟಿ
1. ಹೌ ಟು ಸೆಂಡ್ ಸ್ಟಿಕ್ಕರ್ ಆನ್ ವಾಟ್ಸಪ್,
2. ಹೌ ಟು ಲಿಂಕ್ ಆಧಾರ್ ವಿತ್ ಮೊಬೈಲ್ ನಂಬರ್,
3. ಹೌ ಟು ಮೇಕ್ ರಂಗೋಲಿ,
4. ಹೌ ಟು ಪೋರ್ಟ್ ಮೊಬೈಲ್ ನಂಬರ್,
5. ಹೌ ಟು ಇನ್‌ವೆಸ್ಟ್ ಇನ್ ಬಿಟ್ಕಾಯ್ನ್,
6. ಆಯುಷ್ಮಾನ್ ಭಾರತ್ ಯೋಜನ ಹೌ ಟು ಅಪ್ಲೇ,
7. ಹೌ ಟು ರಿಮೂವ್ ಹೋಲಿ ಕಲರ್ ಫ್ರಮ್ ಫೇಸ್
8. ಹೌ ಟು ಚೆಕ್ 10th ರಿಸಲ್ಟ್ 2018
9. ಹೌ ಟು ಸಾಲ್ವ್ ರುಬಿಕ್ಸ್ ಕ್ಯೂಬ್
10. ಹೌ ಟು ಚೆಕ್ ನೇಮ್ ಇನ್ ಎನ್‌ಆರ್‌ಸಿ ಅಸ್ಸಾಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com