ಇತಿಹಾಸ ಸೃಷ್ಟಿಸಲು ಇಸ್ರೋ ಸಜ್ಜು; ಪುನರ್ ಬಳಸುವ ರಾಕೆಟ್ ಗಳ ನಿರ್ಮಾಣ!

ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ(ಇಸ್ರೋ) ಮುಂದಾಗಿದ್ದು ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

Published: 13th December 2018 12:00 PM  |   Last Updated: 13th December 2018 01:54 AM   |  A+A-


ಸಂಗ್ರಹ ಚಿತ್ರ

Posted By : VS
Source : Online Desk
ನವದೆಹಲಿ: ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ(ಇಸ್ರೋ) ಮುಂದಾಗಿದ್ದು ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. 

ಬಾಹ್ಯಾಕಾಶದ ಕಸವಾಗಿ ಉಳಿಯುವ ಈ ರಾಕೆಟ್ ಭಾಗಕ್ಕೆ ಮರುಜೀವ ಕೊಟ್ಟು ಅದನ್ನು ಪುನಃ ಬಳಸುವ ಹೊಸ ಯೋಜನೆಯೊಂದನ್ನು ಇಸ್ರೋ ಕೈಗೆತ್ತಿಕೊಂಡಿದ್ದು ಇದರಲ್ಲಿ ಯಶಸ್ವಿಯಾಗುವ ಆಶಾಭಾವ ವ್ಯಕ್ತಪಡಿಸಿದೆ. 

ಇನ್ನು ವಿಶೇಷವೆಂದರೆ ಪ್ರಪಂಚದಲ್ಲಿ ಯಾರೂ ಕೂಡ ಈ ಕುರಿತ ಸಂಶೋಧನೆ ನಡೆಸುತ್ತಿಲ್ಲ. ಆದರೆ ಇಸ್ರೋ ಇಂಥ ಒಂದು ಮೈಲಿಗಲ್ಲು ನಿರ್ಮಿಸಲು ಹೊರಟಿದೆ. ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಈ ಕುರಿತು ನೀಡಿರುವ ಸಂದರ್ಶನದಲ್ಲಿ ಈ ಕುರಿತು ವಿವರಿಸಿದ್ದಾರೆ. 

ಪಿಎಸ್ಎಲ್ವಿ 4 ರಾಕೆಟ್ ಉಡಾವಣೆ ಮಾಡಿದ ನಂತರ ಕೊನೆಯಲ್ಲಿ ಉಳಿಯುವ ಭಾಗವನ್ನು ಪಿಎಸ್4 ಎಂದು ಕರೆಯುತ್ತಾರೆ. ಉಪಗ್ರಹವನ್ನು ಕಕ್ಷೆಯಲ್ಲಿ ಬಿಟ್ಟು ನಂತರ ಈ ಭಾಗವು ಅದೇ ಕಕ್ಷೆಯಲ್ಲಿ ಸಕ್ರಿಯವಾಗಿರುತ್ತದೆ. ಈ ಭಾಗಕ್ಕೆ ಬ್ಯಾಟರಿ ಹಾಗೂ ಸೋಲಾರ್ ಪ್ಯಾನಲ್ ಗಳನ್ನು ಸೇರಿಸಿ ಹೊಸ ವ್ಯವಸ್ಥೆಯ ಮೂಲಕ ನಿಯಂತ್ರಿಸುವ ಪ್ರಯೋಗ ನಡೆಸಲಾಗುತ್ತದೆ ಎಂದರು. 

ರಾಕೆಟ್ ಉಡಾವಣೆಯಂತಹ ದೊಡ್ಡ ಖರ್ಚನ್ನು ಉಳಿಸುವ ಕಾರಣ ಇದೊಂದು ಪರಿಣಾಮಕಾರಿ ಉಪಾಯವಾಗಲಿದೆ ಎಂದು ಶಿವನ್ ತಿಳಿಸಿದ್ದಾರೆ. 
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp