ಇಂದು ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮ ಶತಮಾನೋತ್ಸವ: ಗೂಗಲ್ ವಿಶೇಷ ಡೂಡಲ್

ಆ.12. ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ. 
ಇಂದು ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮ ಶತಮಾನೋತ್ಸವ: ಗೂಗಲ್ ವಿಶೇಷ ಡೂಡಲ್

ನವದೆಹಲಿ: ಆ.12. ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ. 

ಮುಂಬೈ ಮೂಲದ ಗೆಸ್ಟ್ ಆರ್ಟಿಸ್ಟ್ ಪವನ್ ರಾಜುರ್ಕರ್ ಈ ಡೂಡಲ್ ರಚಿಸಿದ್ದು,  ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವ ಸಲ್ಲಿಸಲಾಗಿದೆ. ವಿಕ್ರಮ್ ಸಾರಾಭಾಯ್ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಯ ಚಾಲಕ ಶಕ್ತಿ ಎಂದು ಗುರುತಿಸಿದ್ದನ್ನು ಗೂಗಲ್ ಸ್ಮರಿಸಿದೆ. 

1919 ರಲ್ಲಿ ವಿಕ್ರಮ್ ಸಾರಾಭಾಯ್ ಅವರು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಜನಿಸಿದ್ದರು. ಗುಜರಾತ್ ಕಾಲೇಜಿನಿಂದ ಪದವಿ ಗಳಿಸಿದ ಬಳಿಕ ಇಂಗ್ಲೆಂಡ್ ನ ಕೇಂಬ್ರಿಡ್ಜ್ ವಿವಿಯಿಂದ ಡಾಕ್ಟರೇಟ್ ಪಡೆದ ಸಾರಾಭಾಯ್, ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಸಂಶೋಧನಾ ಕೇಂದ್ರದಲ್ಲಿ ಹೂಡಿಕೆ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.

1962 ರಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿಯನ್ನು ರಚಿಸಿದ್ದರು. ಇದೇ ಕಾಲಾನಂತರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ. 

1966 ರಲ್ಲಿ ಪದ್ಮ ಭೂಷಣ, 1972 ರಲ್ಲಿ ವಿಕ್ರಮ್ ಸಾರಾಭಾಯ್ ಗೆ ಮರಣೋತ್ತರವಾಗಿ ಪ್ರದಾನ ಮಾಡಲಾದ ಪ್ರತಿಷ್ಠಿತ ಪ್ರಶಸ್ತಿಗಳು. 

ರಷ್ಯಾದ ಸ್ಪುಟ್ನಿಕ್ ಉಪಗ್ರಹ ಉಡಾವಣೆಯ ನಂತರ ದೇಶೀಯವಾಗಿ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುವ ಪ್ರಾಮುಖ್ಯತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು. 

ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವುದರಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾವು ಅದ್ವಿತೀಯರಾಗಿರಬೇಕೆಂಬುದು ಬಾಹ್ಯಾಕಾಶ ಸಂಸ್ಥೆಯ ಬಗ್ಗೆ ದೂರದೃಷ್ಟಿ ಹೊಂದಿದ್ದ ವಿಕ್ರಮ್ ಸಾರಾಭಾಯ್ ಅವರ ಕನಸಾಗಿತ್ತು. ಈಗ ಇಸ್ರೋ  ಚಂದ್ರನ ಮೇಲೆ ನೌಕೆ ಕಳಿಸಿರುವ ಜಗತ್ತಿನ 4ನೇ ರಾಷ್ಟ್ರವಾಗಿದ್ದು, ವಿಕ್ರಮ್ ಸಾರಾಭಾಯ್ ಅವರ ಕನಸನ್ನು ಬಹುಪಾಲು ನನಸು ಮಾಡಿ ಜಾಗತಿಕ ಮಟ್ಟದಲ್ಲಿ ಯಶಸ್ವಿ ಬಾಹ್ಯಾಕಾಶ ಸಂಸ್ಥೆಯಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com