ಭಾರತೀಯ ರೈಲ್ವೆಯಿಂದ ಮತ್ತೊಂದು ಮೈಲುಗಲ್ಲು: ಗಂಟೆಗೆ 180 ಕಿ.ಮೀ ಸಾಮರ್ಥ್ಯದ ಇಂಜಿನ್ ತಯಾರು

ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಗಂಟೆಗೆ 180 ಕಿ.ಮೀ ಚಲಿಸುವ ಸಾಮರ್ಥ್ಯದ ಇಂಜಿನ್ ನ್ನು 
ಭಾರತೀಯ ರೈಲ್ವೆಯಿಂದ ಮತ್ತೊಂದು ಮೈಲುಗಲ್ಲು: ಗಂಟೆಗೆ 180 ಕಿ.ಮೀ ಸಾಮರ್ಥ್ಯದ ಇಂಜಿನ್ ತಯಾರು

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಗಂಟೆಗೆ 180 ಕಿ.ಮೀ ಚಲಿಸುವ ಸಾಮರ್ಥ್ಯದ ಇಂಜಿನ್ ನ್ನು ತಯಾರಿಸಿದೆ. 

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಪಶ್ಚಿಮ ಬಂಗಾಳದ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ಈ ಇಂಜಿನ್ ನ್ನು ತಯಾರಿಸಿದ್ದು, ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟರ್ ನಲ್ಲಿ ಹೆಮ್ಮೆಯಿಂದ ಇದನ್ನು ಹಂಚಿಕೊಂಡಿದ್ದಾರೆ. ಈ ಹೈ-ಸ್ಪೀಡ್ ಇಂಜಿನ್ ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ರೈಲುಗಳು ಹಿಂದೆಂದಿಗಿಂತಲೂ ವೇಗವಾಗಿರಲಿವೆ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ಭಾರತದ ಅತ್ಯಂತ ವೇಗವಾಗಿ ಚಲಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ಫೆ.1 ರಂದು 180 ಕಿ.ಮೀ ವೇಗದಲ್ಲಿ ಚಲಿಸಿ ದಾಖಲೆ ನಿರ್ಮಿಸಿತ್ತು. ಈ ಇಂಜಿನ್ ನ್ನು ಚೆನ್ನೈ ನ ಇಂಟಿಒಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಇಂಜಿನ್ ಪ್ರತ್ಯೇಕವಾಗಿಲ್ಲದ ಈ ರೈಲು ದೆಹಲಿ-ವಾರಾಣಸಿ ನಡುವೆ ಸಂಚರಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com