ಆರ್ಟೆಮಿಸ್ ಯೋಜನೆಗೆ ಇಸ್ರೊ ನೆರವು ಪಡೆಯಲಿರುವ ನಾಸಾ

ಭಾರತದ ಚಂದ್ರಯಾನ -2 ಬಾಹ್ಯಾಕಾಶ ನೌಕೆ ನಾಸಾ ಸಂಸ್ಥೆಯ ಮಹಾತ್ವಾಕಾಂಕ್ಷಿ ಅರ್ಟೆಮಿಸ್ ಕಾರ್ಯಾಚರಣೆಗೆ ಸಹ ಅಂಕಿಅಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.
 

Published: 21st August 2019 10:48 AM  |   Last Updated: 21st August 2019 10:48 AM   |  A+A-


ISRO chief K Sivan

ಇಸ್ರೊ ಅಧ್ಯಕ್ಷ ಕೆ ಶಿವನ್

Posted By : Sumana Upadhyaya
Source : The New Indian Express

ಬೆಂಗಳೂರು: ಭಾರತದ ಚಂದ್ರಯಾನ -2 ಬಾಹ್ಯಾಕಾಶ ನೌಕೆ ನಾಸಾ ಸಂಸ್ಥೆಯ ಮಹಾತ್ವಾಕಾಂಕ್ಷಿ ಅರ್ಟೆಮಿಸ್ ಕಾರ್ಯಾಚರಣೆಗೆ ಸಹ ಅಂಕಿಅಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.


ಅಮೆರಿಕಾದ ನಾಸಾ ಸಂಸ್ಥೆ ಅರ್ಟೆಮಿಸ್  ಗಗನಯಾತ್ರಿಗಳನ್ನು 2024ಕ್ಕೆ ಚಂದ್ರನಲ್ಲಿಗೆ ಕಳುಹಿಸಲಿದೆ. ಚಂದ್ರನ ಮೇಲೆ ಸುಸ್ಥಿರ ಮಾನವ ಉಪಸ್ಥಿತಿಯನ್ನು ಕಂಡುಕೊಂಡ ನಂತರ ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳಿಗೆ ದಾರಿ ಸಿದ್ಧಪಡಿಸಲಿದೆ ಎಂದು ನಾಸಾ ತಿಳಿಸಿದೆ.


ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲು ನಾಸಾಗೆ ಚಂದ್ರಯಾನ-2 ಬಾಹ್ಯಾಕಾಶ ನೌಕೆ ನೆರವಾಗಲಿದೆ. ಹಾಗಾದರೆ ಏನೇನು ವಿಷಯಗಳನ್ನು ನಾಸಾಗೆ ಚಂದ್ರಯಾನ-2 ನೀಡಲಿದೆ ಎಂದು ಈಗಲೇ ಹೇಳುವುದು ಕಷ್ಟ. ಚಂದ್ರನ ದಕ್ಷಿಣ ದ್ರುವದಲ್ಲಿ ಮಾನವನ ಇರುವಿಕೆಯನ್ನು ನಾಸಾ ಘೋಷಿಸಿದ್ದು ಚಂದ್ರಯಾನ -2 ಸಂಸ್ಥೆಯ ಮುಂದಿನ ಕಾರ್ಯಗಳಿಗೆ ಮತ್ತು ಸಲಹೆ ಸೂಚನೆಗಳನ್ನು ನೀಡಲು ಸಹಕಾರಿಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.


ನಾಸಾ ಮಾಡಿರುವ ಟ್ವೀಟನ್ನು ಉಲ್ಲೇಖಿಸಿ ಮಾತನಾಡಿದ ಅವರು, ಚಂದ್ರಯಾನ -2 ನಾಸಾ ಸಂಸ್ಥೆಗೆ ಮುಖ್ಯ ವಿಷಯ ಒದಗಿಸುವ ಮೂಲವಾಗಲಿದೆ. ಕಳೆದ ಜುಲೈ 22ರಂದು ಚಂದ್ರಯಾನ-2 ಉಡಾವಣೆಯಾದಾಗ ಟ್ವೀಟ್ ಮಾಡಿದ್ದ ನಾಸಾ ಇಸ್ರೊ ತಂಡಕ್ಕೆ ಅಭಿನಂದನೆಗಳು. ಚಂದ್ರನ ಅಧ್ಯಯನಕ್ಕೆ ಈ ಕಾರ್ಯಾಚರಣೆ ಸಹಾಯವಾಗಲಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಇನ್ನು ಕೆಲ ವರ್ಷಗಳಲ್ಲಿ ಅರ್ಟಿಮಿಸ್ ಕಾರ್ಯಾಚರಣೆಗೆ ನಾವು ಗಗನಯಾತ್ರಿಗಳನ್ನು ಕಳುಹಿಸಲಿದ್ದು ಆಗ ಚಂದ್ರಯಾನ-2 ನೆರವಿಗೆ ಬರಲಿದೆ ಎಂದು ಹೇಳಿದೆ.

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp