ಮೂರನೇ ಸುತ್ತಿನ ಚಂದ್ರನ ಕಕ್ಷೆಗೆ ಸೇರುವ ಚಂದ್ರಯಾನ-2 ಯೋಜನೆ ಯಶಸ್ವಿ: ಇಸ್ರೊ 

ಚಂದ್ರಯಾನ-2 ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಇನ್ನು ಕೇವಲ 11 ದಿನಗಳು ಬಾಕಿ. ಬಾಹ್ಯಾಕಾಶ ನೌಕೆ ಇಂದು ಮೂರನೇ ಸುತ್ತಿನ ಕಕ್ಷೆಯ ಪಯಣವನ್ನು ಯಶಸ್ವಿಯಾಗಿ ಪೂರೈಸಿದೆ.
 

Published: 28th August 2019 11:55 AM  |   Last Updated: 28th August 2019 11:58 AM   |  A+A-


Chandrayaan 2

ಚಂದ್ರಯಾನ-2

Posted By : Sumana Upadhyaya
Source : PTI

ಬೆಂಗಳೂರು: ಚಂದ್ರಯಾನ-2 ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಇನ್ನು ಕೇವಲ 11 ದಿನಗಳು ಬಾಕಿ. ಬಾಹ್ಯಾಕಾಶ ನೌಕೆ ಇಂದು ಮೂರನೇ ಸುತ್ತಿನ ಕಕ್ಷೆಯ ಪಯಣವನ್ನು ಯಶಸ್ವಿಯಾಗಿ ಪೂರೈಸಿದೆ.


ಚಂದ್ರನೊಂದಿಗಿನ ಸಂಧಿಸುವಿಕೆಗಾಗಿ ಚಂದ್ರನ ಕಕ್ಷೆಯಲ್ಲಿ ಪ್ರಸ್ತುತ ಚಂದ್ರಯಾನ-2 ಸುತ್ತುತ್ತಿದೆ. ಭಾರತೀಯ ಕಾಲಮಾನ ಇಂದು ಬೆಳಗ್ಗೆ 9 ಗಂಟೆ 4 ನಿಮಿಷಕ್ಕೆ ಮೂರನೇ ಸುತ್ತು ಕಕ್ಷಾ ಪಯಣವನ್ನು ಪೂರೈಸಿದೆ. ಪಯಣದ ಅವಧಿ 1190 ಸೆಕೆಂಡ್ ಗಳಾಗಿದೆ. ಕಕ್ಷೆ 179ಕಿಲೋ ಮೀಟರ್ *1412 ಕಿಲೋ ಮೀಟರ್ ಆಗಿದೆ ಎಂದು ಇಸ್ರೊ ತಿಳಿಸಿದೆ.


ಬಾಹ್ಯಾಕಾಶದ ಎಲ್ಲಾ ಪಾರಾಮೀಟರ್ ಗಳು ಸಹಜವಾಗಿದೆ. ಮುಂದಿನ ಕಕ್ಷೆಯ ಪಯಣ ಅಂದರೆ ನಾಲ್ಕನೇ ಸುತ್ತು ಆಗಸ್ಟ್ 30ರಂದು ಭಾರತೀಯ ಕಾಲಮಾನ ಸಂಜೆ 6ರಿಂದ 7 ಗಂಟೆಯ ನಡುವೆ ನಡೆಯಲಿದೆ.


ಚಂದ್ರಯಾನ-2 ಬಾಹ್ಯಾಕಾಶ ನೌಕೆ ಭಾರತದ ಎರಡನೇ ಚಂದ್ರಯಾನವಾಗಿದೆ. ಕಳೆದ ಆಗಸ್ಟ್ 20ರಂದು ಮೊದಲ ಬಾರಿಗೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಿತ್ತು. 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp