ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಟ್ವಿಟರ್ ಸಹಸಂಸ್ಥಾಪಕ

ಟ್ವಿಟರ್ ನ ನಿರ್ದೇಶಕ ಮಂಡಳಿ ಸದಸ್ಯತ್ವದ ಹುದ್ದೆಯನ್ನು ಸಂಸ್ಥೆಯ ಸಹಸಂಸ್ಥಾಪಕ ಇವಾನ್ ವಿಲಿಯಮ್ಸ್ ತ್ಯಜಿಸಿದ್ದಾರೆ.

Published: 23rd February 2019 12:00 PM  |   Last Updated: 23rd February 2019 08:21 AM   |  A+A-


Twitter co-founder Williams steps down from board

ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಟ್ವಿಟರ್ ಸಹಸಂಸ್ಥಾಪಕ

Posted By : SBV SBV
Source : Online Desk
ಟ್ವಿಟರ್ ನ ನಿರ್ದೇಶಕ ಮಂಡಳಿ ಸದಸ್ಯತ್ವದ ಹುದ್ದೆಯನ್ನು ಸಂಸ್ಥೆಯ ಸಹಸಂಸ್ಥಾಪಕ ಇವಾನ್ ವಿಲಿಯಮ್ಸ್ ತ್ಯಜಿಸಿದ್ದಾರೆ. 

ಕಳೆದ 12 ವರ್ಷಗಳಿಂದ ಟ್ವಿಟರ್ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಅದೃಷ್ಟ ಎಂದು ಟ್ವೀಟ್ ಮೂಲಕ ತಮ್ಮ ರಾಜೀನಾಮೆಯನ್ನು ವಿಲಿಯಮ್ಸ್ ಘೋಷಿಸಿದ್ದಾರೆ. ಇದೇ ವೇಳೆ ಟ್ವಿಟರ್ ನ ಉದ್ಯೋಗಿಗಳ ಶ್ರಮಕ್ಕೆ ವಿಲಿಯಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಉತ್ತೇಜನ ತುಂಬುವ ಕೆಲಸವನ್ನು ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. 

2008 ರಲ್ಲಿ ಸಂಸ್ಥೆಯ ಸಿಇಒ ಆಗಿದ್ದ ಜಾಕ್ ಡಾರ್ಸೆ ನಂತರ ವಿಲಿಯಮ್ಸ್ ಆ ಹುದ್ದೆಯನ್ನು ನಿರ್ವಹಿಸಿದ್ದರು. ಈಗ 2012 ರಲ್ಲಿ ಪ್ರಾರಂಭವಾದ ಸ್ಯಾನ್ ಫ್ರಾನ್ಸಿಸ್ಕೋದ ಆನ್ ಲೈನ್ ಪಬ್ಲಿಶಿಂಗ್ ಟೆಕ್ ಸಂಸ್ಥೆ ಮೀಡಿಯಮ್ ಗೆ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp