ಸೌರಮಂಡಲವನ್ನೇ ಬಿಟ್ಟು ಹೊರ ಹೋದ 'ನ್ಯೂಹಾರಿಜನ್', ವಿಶ್ವದ ಅತ್ಯಂತ ದೂರದ ಅಧ್ಯಯನಕ್ಕೆ ನಾಸಾ ಸಜ್ಜು

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಐತಿಹಾಸಿಕ ಸಾಧನೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ತನ್ನ 'ನ್ಯೂಹಾರಿಜನ್' ಉಪಗ್ರಹದ ಮೂಲಕ ವಿಶ್ವದ ಅತೀ ದೂರದ ಬಾಹ್ಯಾಕಾಶ ಅಧ್ಯಯನಕ್ಕೆ ಮುಂದಾಗಿದೆ.
ನಾಸಾ ಚಿತ್ರ
ನಾಸಾ ಚಿತ್ರ
ವಾಷಿಂಗ್ಟನ್: ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಐತಿಹಾಸಿಕ ಸಾಧನೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ತನ್ನ 'ನ್ಯೂಹಾರಿಜನ್' ಉಪಗ್ರಹದ ಮೂಲಕ ವಿಶ್ವದ ಅತೀ ದೂರದ ಬಾಹ್ಯಾಕಾಶ ಅಧ್ಯಯನಕ್ಕೆ ಮುಂದಾಗಿದೆ.
ಹೌದು ಈ ಹಿಂದೆ ಸೌರಮಂಡಲದ ಆಚೆಗಿನ ಭೂಮಿ ಮತ್ತು ಅನ್ಯಗ್ರಹ ಜೀವಗಳ ಕುರಿತ ಅಧ್ಯಯನಕ್ಕಾಗಿ ನಾಸಾ ಹಾರಿಬಿಟ್ಟಿದ್ದ 'ನ್ಯೂಹಾರಿಜನ್' ಉಪಗ್ರಹ ಇದೀಗ ನಮ್ಮ ಸೌರಮಂಡಲದ ಕಟ್ಟ ಕಡೆಯ ಗ್ರಹ ಪ್ಲೂಟೋವನ್ನೂ ದಾಟಿ ಹೋಗಿದ್ದು, ಸೌರಮಂಡಲದಾಚೆಗೆ ಹೋಗಿ ತನ್ನ ಅಧ್ಯಯನ ಮುಂದುವರೆಸಿದೆ. ತನ್ನ ಹಾದಿಯಲ್ಲಿ ನ್ಯೂ ಹಾರಿಜನ್ ಉಪಗ್ರಹ ಜಗತ್ತಿನ ಅತ್ಯಂತ ಹಳೆಯ ಹಿಮಗಲ್ಲನ್ನು ಜೂಮ್ ಮಾಡಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ  ವೈರಲ್ ಆಗಿದೆ.
ಸೌರಮಂಡಲದ ಹೊರಗಿನ ಕೈಪರ್ ಬೆಲ್ಟ್ ಸಮೀಪದ ನ್ಯೂ ಹಾರಿಜನ್ ಉಪಗ್ರಹ ಈ ಹಿಮಗಲ್ಲನ್ನು ಸೆರೆಹಿಡಿದಿದೆ. ನ್ಯೂಹಾರಿಜನ್ ನೌಕೆಯ ಕಾರ್ಯಾಚರಣೆಯನ್ನು ನಾಸಾ ಲೈವ್ ಟೆಲಿಕಾಸ್ಟ್ ಮಾಡುತ್ತಿದೆ. ಇನ್ನು ನ್ಯೂಹಾರಿಜನ್ ಪ್ರಸ್ತುತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಕಟ್ಟಕಡೆಯ ಲೇಯರ್ ಅಲ್ಟಿಮಾ ಠ್ಯುಲಿಯನ್ನೂ ದಾಟಿ ಮುಂದೆ ಸಾಗಿದೆ ಎಂದು ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. 
ವಿಜ್ಞಾನಿಗಳು ಅಲ್ಟಿಮಾ  ಠ್ಯುಲಿ ಇಡೀ ಜಗತ್ತಿನ ಕಟ್ಟಕಡೆಯ ಲೇಯರ್ ಎಂದು ಹೇಳುತ್ತಿದ್ದರೂ ವಿಜ್ಞಾನಿಗಳಿಗೆ ಈ ಅಲ್ಟಿಮಾ ಠ್ಯುಲಿ ಹೇಗಿದೆ.. ಅದರ ಸ್ವರೂಪ ಎಷ್ಟಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಪ್ರಸ್ತುತ ಈ ಲೇಯರ್ ಅನ್ನು ದಾಟಿ ಹೋಗುವ ನ್ಯೂಹಾರಿಜನ್ ಉಪಗ್ರಹದ ಮೂಲಕ ಇದರ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಿದ್ದಾರೆ. 
ಇನ್ನು ನ್ಯೂಹಾರಿಜನ್ ಉಪಗ್ರಹ ಅತ್ಯಂತ ಪ್ರಬಲ ಸಿಗ್ನಲ್ ವ್ಯವಸ್ಥೆ ಹೊಂದಿರುವ ಉಪಗ್ರಹ ಎಂದು ಹೇಳಲಾಗುತ್ತಿದ್ದು, ಅತ್ಯಂತ ವೇಗದಲ್ಲಿ ಇದು ಸಿಗ್ನಲ್ ರವಾನಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಉಪಗ್ರಹದ ಸಿಗ್ನಲ್ ವೇಗ ಗಂಟೆಗೆ ಸುಮಾರು 33 ಸಾವಿರ ಮೈಲುಗಳಷ್ಟಿದೆ. ಉಪಗ್ರಹದಿಂದ ಅಲ್ಟಿಮಾ  ಠ್ಯುಲಿ 2,200 ಮೈಲು ದೂರದಲ್ಲಿದ್ದು, ಇದೇ ಕಾರಣಕ್ಕೆ ಈ ಉಪಗ್ರಹದ ಮೇಲೆ ನಾಸಾ ವಿಜ್ಞಾನಿಗಳು ತುಂಬಾ ನಿರೀಕ್ಷೆ ಹೊಂದಿದ್ದಾರೆ. ಉಪಗ್ರಹದಿಂದ ರವಾನಿಸುವ ಸಿಗ್ನಲ್ ಅಲ್ಟಿಮಾ  ಠ್ಯುಲಿಗೆ ತಲುಪಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಅಂತೆಯೇ ಸೌರಮಂಡಲ ರಚನೆ ವೇಳೆ ಅಲ್ಟಿಮಾ  ಠ್ಯುಲಿ ಪಾತ್ರದ ಕುರಿತೂ ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದು, ಪ್ರಸ್ತುತ ಅಧ್ಯಯನದ ಮೂಲಕ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವ ಸಾಧ್ಯತೆ ಎಂದು ನಂಬಲಾಗಿದೆ. 2014ರಲ್ಲಿ ಹಬಲ್ ಟೆಲಿಸ್ಕೋಪ್ ಮೂಲಕ ಈ ಅಲ್ಟಿಮಾ  ಠ್ಯುಲಿಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com