ಇಂದು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿಲ್ಲ ಆತಂಕ

ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.
ಭಾರತೀಯ ಕಾಲಮಾನದ ಅನ್ವಯ ಇಂದು ಬೆಳಗ್ಗೆ 5 ಗಂಟೆಯಿಂದ 9:18 ರವರೆಗೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದ್ದು, ಈಶಾನ್ಯ ಏಷ್ಯಾದ ಸೈಬೀರಿಯಾ, ಮಂಗೋಲಿಯಾ, ಉತ್ತರ ಫೆಸಿಫಿಕ್, ಚೀನಾ, ಕೊರಿಯಾ, ಜಪಾನ್​ ರಾಷ್ಟ್ರಗಳಲ್ಲಿ ಗೋಚರಿಸಿದೆ. 
ಇನ್ನು ಸೂರ್ಯನ ಗ್ರಹಣದ ನಂತರ ಇದೇ ತಿಂಗಳ 21 ರಂದು ಚಂದ್ರಗ್ರಹಣ ಜರುಗಲಿದ್ದು, ವರ್ಷದ ಮೊದಲ ಚಂದ್ರಗ್ರಹಣ 21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯ ಗ್ರಹಣದಂತೆ, ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com