ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು, 'ಕಲಂಸಟ್ ಪ್ಲೇಲೋಡ್' ಸಹಿತ ಪಿಎಸ್ಎಲ್ ವಿ ಸಿ44 ಉಡಾವಣೆಗೆ ಸಿದ್ಧ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದು, ಇದೇ ಜನವರಿ 24ರಂದು 'ಕಲಂಸಟ್ ಪ್ಲೇಲೋಡ್' ಸಹಿತ ಪಿಎಸ್ ಎಲ್ ವಿ ಸಿ44 ಉಡಾವಣೆಗೆ ಸಿದ್ಧವಾಗಿದೆ.

Published: 16th January 2019 12:00 PM  |   Last Updated: 16th January 2019 11:20 AM   |  A+A-


PSLV-C44 to launch Kalamsat, Microsat satellite on Jan 24

ಸಂಗ್ರಹ ಚಿತ್ರ

Posted By : SVN SVN
Source : PTI
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದು, ಇದೇ ಜನವರಿ 24ರಂದು 'ಕಲಂಸಟ್ ಪ್ಲೇಲೋಡ್' ಸಹಿತ ಪಿಎಸ್ ಎಲ್ ವಿ ಸಿ44 ಉಡಾವಣೆಗೆ ಸಿದ್ಧವಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋದ ಯಶಸ್ವೀ ಉಡಾವಣಾ ನೌಕಾ ಸರಣಿ ಪಿಎಸ್ಎಲ್ ವಿ ಸಿ44 ನೌಕೆಯನ್ನು ಇದೇ ಜನವರಿ 24ರಂದು ಉಡಾವಣೆಗೆ ಸಜ್ಜುಗೊಳಿಸಲಾಗಿದೆ. ಅಂದು ಪಿಎಸ್ಎಲ್ ವಿ-ಸಿ44 ನೌಕೆಯೊಂದಿಗೆ ಮೈಕ್ರೋಸ್ಯಾಟ್-ಆರ್ ಸ್ಯಾಟೆಲೈಟ್ ಅನ್ನು ಉಡಾವಣೆ ಮಾಡಲಾಗುತ್ತಿದೆ. 

ಈ ಉಡಾವಣೆ ಮೂಲಕ ಇಸ್ರೋ ನಾಲ್ಕನೇ ಹಂತದ 'ಕಲಂಸಟ್ ಪ್ಲೇಲೋಡ್' ಇಂಧನವನ್ನು ಬಳಕೆ ಮಾಡಲಾಗುತ್ತಿದೆ. ಪಿಎಸ್ಎಲ್ ವಿ-ಡಿಎಲ್ ಹಾಲಿ ಉಡಾವಣಾ ನೌಕೆ ಪಿಎಸ್ಎಲ್ ವಿ ಹೊಸ ಅವತರಣಿಕೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ 'ಕಲಂಸಟ್ ಪ್ಲೇಲೋಡ್' ಇಂಧನವನ್ನು ಉಡಾವಣೆಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಈ ಹಿಂದೆ ನಡೆದ ಪರೀಕ್ಷಾರ್ಥ ಉಡಾವಣೆಯಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಜನವರಿ 24ರಂದು ಅಧಿಕೃತವಾಗಿ ಪಿಎಸ್ಎಲ್ ವಿಯ ನಾಲ್ಕನೇ ಹಂತದ ಉಡಾವಣಾ ನೌಕೆಯಲ್ಲಿ ಬಳಕೆ ಮಾಡಲಾಗುತ್ತಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp