ಇನ್ಸ್ಟಾಗ್ರಾಂ, ವಾಟ್ಸ್ ಆ್ಯಪ್, ಮೆಸೆಂಜರ್ ವಿಲೀನಕ್ಕೆ ಫೇಸ್ ಬುಕ್ ಚಿಂತನೆ

ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಮೆಸೆಂಜರ್ ಅನ್ನು ವಿಲೀನಗೊಳಿಸಿ, ಈ ಮೂರಕ್ಕೂ ಒಂದೇ ಆ್ಯಪ್ ರೂಪಿಸಲು ಫೇಸ್‌ಬುಕ್ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಮೆಸೆಂಜರ್ ಅನ್ನು ವಿಲೀನಗೊಳಿಸಿ, ಈ ಮೂರಕ್ಕೂ ಒಂದೇ ಆ್ಯಪ್ ರೂಪಿಸಲು ಫೇಸ್‌ಬುಕ್ ಚಿಂತನೆ ನಡೆಸಿದೆ.
ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಖಾತೆಗಳನ್ನು ಒಂದರಲ್ಲಿಯೇ ವಿಲೀನಗೊಳಿಸಿ, ಅದನ್ನೂ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ ಮಾಡಿ, ಬಳಕೆದಾರರಿಗೆ ಒದಗಿಸಲು ಯತ್ನಿಸಲಾಗುತ್ತಿದೆ ಎಂದು ಶುಕ್ರವಾರ ಫೇಸ್ ಬುಕ್ ತಿಳಿಸಿದೆ.
ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಆ್ಯಪ್‌ಗಳು ಈಗಿರುವಂತೆಯೇ ಪ್ರತ್ಯೇಕವಾಗಿಯೂ ಇರಲಿವೆ. ಅದರ ಜತೆಗೆ ಈ ಎಲ್ಲ ಮೂರು ಆ್ಯಪ್‌ಗಳನ್ನು ಮಿಶ್ರ ಮಾಡಿ, ಎಲ್ಲವೂ ಒಂದೇ ಕಡೆ ದೊರೆಯುವಂತೆ ಮಾಡಲಾಗುತ್ತದೆ. 
ಈ ಆ್ಯಪ್ ವಿಶೇಷವೆಂದರೆ, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಮೂರರಲ್ಲೂ ಖಾತೆ ಹೊಂದಿರುವವರು ಮತ್ತು ಹೊಂದಿಲ್ಲದವರೂ ಒಬ್ಬರಿಗೊಬ್ಬರು ಸಂದೇಶ ಕಳುಹಿಸಬಹುದು. ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿ, ಫೇಸ್‌ಬುಕ್ ಖಾತೆ ಇಲ್ಲದ, ಆದರೆ ವಾಟ್ಸ್‌ಆ್ಯಪ್ ಖಾತೆ ಹೊಂದಿರುವ ವ್ಯಕ್ತಿಗೆ ಮೆಸೇಜ್ ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು ಫೇಸ್ ಬುಕ್ ವಕ್ತಾರರು ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com