ಭಾರತದ ಬಹುನಿರೀಕ್ಷಿತ 'ಚಂದ್ರಯಾನ-2 ಉಡ್ಡಯನಕ್ಕೆ ಕೌಂಟ್ ಡೌನ್ ಶುರು

ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-2 ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -1ರ ಯಶಸ್ಸಿನ ದಶಕದ ಬಳಿಕ ಸೋಮವಾರ ಮುಂಜಾನೆ ಚಂದ್ರಯಾನ-2 ಉಡ್ಡಯನ ನಡೆಯಲಿದೆ.

Published: 14th July 2019 12:00 PM  |   Last Updated: 14th July 2019 10:56 AM   |  A+A-


Bahubali

ಬಾಹುಬಲಿ

Posted By : ABN ABN
Source : The New Indian Express
ಬೆಂಗಳೂರು: ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-2 ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -1ರ ಯಶಸ್ಸಿನ ದಶಕದ ಬಳಿಕ ಸೋಮವಾರ ಮುಂಜಾನೆ ಚಂದ್ರಯಾನ-2 ಉಡ್ಡಯನ ನಡೆಯಲಿದೆ. 

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ  ಮುಂಜಾನೆ  2-15ಕ್ಕೆ ಚಂದ್ರಯಾನ-2 ಅನುಷ್ಠಾನಗೊಳ್ಳುತ್ತಿದ್ದು, ರೋವರ್, ಲ್ಯಾಂಡರ್ ಹೊತ್ತು ಚಂದ್ರನತ್ತ ಚಿಮ್ಮಲಿದೆ. ಸೆಪ್ಟೆಂಬರ್ 6 ರಂದು ಚಂದ್ರನಲ್ಲಿ ಲ್ಯಾಂಡರ್ ಇಳಿಯಲಿದೆ. 

978 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಭಾರತವೇ ಅಭಿವೃದ್ದಿಪಡಿಸಿದೆ.  ಚಂದ್ರಯಾನ -2 ಅಡಿಯಲ್ಲಿ ಚಂದ್ರನನ್ನು  ಆರ್ಬಿಟರ್ ಲ್ಯಾಂಡರ್, ರೋವರ್ ಎಂಬ ವೈಜ್ಞಾನಿಕ ಪರಿಕರಗಳು ಅಧ್ಯಯನ ನಡೆಸಲಿವೆ. 

ಇಲ್ಲಿ ಲ್ಯಾಂಡರ್ ಗೆ  ವಿಕ್ರಮ್ ಸಾರಾಭಾಯ್ ಹೆಸರಿಡಲಾಗಿದ್ದು, ರೋವರ್ ಗೆ ಪ್ರಜ್ಞಾನ ಎಂಬ ಹೆಸರಿಡಲಾಗಿದೆ. ಇವೆಲ್ಲವನ್ನೂ ಜಿಎಸ್ ಎಲ್ ವಿಎಂಕೆ 2 ಎಂಬ ರಾಕೆಟ್ ಹೊತ್ತೊಯ್ಯಲಿದೆ. ಇದಕ್ಕೆ ಬಾಹುಬಲಿ ಎಂಬ ಅಡ್ಡ ಹೆಸರು ಇಡಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರಯಾನ -2 ಭಾರತದ ಪ್ರತಿಷ್ಠಿತ ಯಾನಗಳಲ್ಲಿ ಒಂದಾಗಿದೆ.  ದೇಶಿಯ ತಂತ್ರಜ್ಞಾನದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ವಿಕ್ರಮ್  ಲ್ಯಾಂಡರ್  ಆರ್ಬಿಟರ್ ನಿಂದ ಪ್ರತ್ಯೇಕಗೊಂಡು ಚಂದ್ರನ ಮೇಲೆ ಇಳಿಯುವ ಕ್ಷಣ ಇಸ್ರೋ ವಿಜ್ಞಾನಿಗಳಿಗೆ ಹೆಚ್ಚಿನ ಕುತೂಹಲ ಮಿಶ್ರಿತ ಭಯದ ಕ್ಷಣವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವಾನಿ ಹೇಳಿದ್ದಾರೆ.

ಚಂದ್ರಯಾನದ ಉದ್ದೇಶಗಳು:  ಚಂದ್ರಯಾನ -2ರಿಂದ ಚಂದ್ರ ನ ಮೂಲದ ಇನ್ನಷ್ಟು ಮಾಹಿತಿ ಸಿಗಲಿದೆ. ಚಂದ್ರನ ಮೇಲ್ಮೆನಲ್ಲಿ ನೀರಿನ ಕಣಗಳ ಹಂಚಿಕೆ ಹಾಗೂ ಪ್ರಸರಣವನ್ನು ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ.

ಮೇಲ್ಮೆ, ಮೇಲ್ಮೆ ಕೆಳಭಾಗ ಹಾಗೂ ಬಾಹ್ಯಾಗೋಳದಲ್ಲಿ ನೀರಿನ ಅಣುಗಳ ಇರುವಿಕೆ ಕುರಿತು ನಡೆಯುವ ಸಂಶೋಧನೆಯು, ಗ್ರಹದ ನೀರಿನ ಮೂಲ ತಿಳಿಯಲು ಸಹಕಾರಿಯಾಗಲಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp