ಮುಂದಿನ ಚಂದ್ರಯಾನ-2 ಉಡಾವಣಾ ದಿನಾಂಕ ಬುಧವಾರ ಘೋಷಣೆ!

ತಾಂತ್ರಿಕ ದೋಷದಿಂದಾಗಿ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯನ್ನು ನಿನ್ನೆ ರದ್ದು ಮಾಡಲಾಗಿದ್ದು ಇದೀಗ ಹೊಸದಾಗಿ ಚಂದ್ರಯಾನ-2 ಉಡಾವಣೆಗೆ ಬುಧವಾರ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.

Published: 16th July 2019 12:00 PM  |   Last Updated: 16th July 2019 12:42 PM   |  A+A-


Chandrayaan 2

ಚಂದ್ರಯಾನ-2

Posted By : VS VS
Source : Online Desk
ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯನ್ನು ನಿನ್ನೆ ರದ್ದು ಮಾಡಲಾಗಿದ್ದು ಇದೀಗ ಹೊಸದಾಗಿ ಚಂದ್ರಯಾನ-2 ಉಡಾವಣೆಗೆ ಬುಧವಾರ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ. 

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಸೋಮವಾರ(ಜುಲೈ 22)ರಂದು ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಇಸ್ರೋ ಮೂಲವನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 

ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ಉಪಗ್ರಹವನ್ನು ಸೋಮವಾರ ಬೆಳಗ್ಗೆ 2:51 ಉಡಾವಣೆ ಮಾಡಬೇಕಿತ್ತು. ಆದರೆ, ಈ ಉಡಾವಣೆಗೂ ಒಂದು ಗಂಟೆ ಮುನ್ನ ರಾಕೆಟ್ ನಲ್ಲಿ ತಾಂತ್ರಿಕ ದೋಷಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಡಾವಣೆಯನ್ನು ರದ್ದು ಮಾಡಲಾಗಿತ್ತು. 

ಈ ತಿಂಗಳಲ್ಲಿ ಕೊನೆಯಲ್ಲಿ ಕಿಟಕಿ(ವಿಂಡೋ) ಉಡಾವಣೆಗೆ ತೆರೆದುಕೊಳ್ಳಲಿದೆ. ಈ ಅವಕಾಶವನ್ನು ಕಳೆದುಕೊಂಡರೆ ಸೆಪ್ಟೆಂಬರ್ ವರೆಗೂ ಕಾಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. 
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp