ಚಂದ್ರಯಾನ-2 ಉಡಾವಣೆಗೆ ಜು.20 ನಿರ್ಣಾಯಕ ದಿನ, ಮುಂದೂಡಿದರೆ ಕಷ್ಟ: ಹಿರಿಯ ವಿಜ್ಞಾನಿ

ಭಾರತದ ಎರಡನೇ ಚಂದ್ರ ಪರಿಶೋಧನಾ ಕಾರ್ಯಾಚರಣೆಯಾದ ಬಹು ನಿರೀಕ್ಷಿತ ಚಂದ್ರಯಾನ-2 ...
ಉಡಾವಣೆಗೆ ಸಿದ್ದವಾಗಿದ್ದ ಚಂದ್ರಯಾನ-2 ಚಿತ್ರ
ಉಡಾವಣೆಗೆ ಸಿದ್ದವಾಗಿದ್ದ ಚಂದ್ರಯಾನ-2 ಚಿತ್ರ
ಬೆಂಗಳೂರು: ಭಾರತದ ಎರಡನೇ ಚಂದ್ರ ಪರಿಶೋಧನಾ ಕಾರ್ಯಾಚರಣೆಯಾದ ಬಹು ನಿರೀಕ್ಷಿತ ಚಂದ್ರಯಾನ-2 ವಿಫಲವಾಗದೆ ಮತ್ತು ಯಾವುದೇ ಅಪಾಯಗಳಿಲ್ಲದೆ ಯಶಸ್ವಿಯಾಗಬೇಕೆಂದರೆ ಜುಲೈ 20ರೊಳಗೆ ಉಡಾವಣೆಯಾಗಬೇಕು, ನಂತರ ಮುಂದೂಡಿದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಅಂತರಿಕ್ಷ ವಿಜ್ಞಾನಿ. 
ಮೊನ್ನೆ ಸೋಮವಾರ ನಸುಕಿನ ಜಾವ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. 
ಚಂದ್ರಯಾನ-1 ಉಡಾವಣೆಯಲ್ಲಿ ಕೆಲಸ ಮಾಡಿದ್ದ ಹಿರಿಯ ಅಂತರಿಕ್ಷ ವಿಜ್ಞಾನಿ ಹೇಳುವ ಪ್ರಕಾರ, ಚಂದ್ರ ವರ್ಗಾವಣೆ ಪಥವನ್ನು (ಎಲ್‌ಟಿಟಿ) (ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಯ ಕಡೆಗೆ ಬಾಹ್ಯಾಕಾಶ ನೌಕೆಯ ಚಲನೆ) ಆಗಸ್ಟ್ 1 ರಂದು ಪೂರ್ಣಗೊಳಿಸಬೇಕಾಗಿದೆ, ಇದನ್ನು ಟಿ + 17 ಎಂದು ಕರೆಯಲಾಗುತ್ತದೆ, ಅಥವಾ ಆರಂಭದಲ್ಲಿ ಲೆಕ್ಕಹಾಕಿದ ಜುಲೈ 15ರ ನಸುಕಿನ ಜಾವ 2 ಗಂಟೆ 51 ನಿಮಿಷದಿಂದ 17 ದಿನಗಳು ಎಂದು ಲೆಕ್ಕಾಚಾರ ಹಾಕಲಾಗುತ್ತದೆ. 
ಚಂದ್ರನ ಕಕ್ಷೆಗೆ ಉಪಗ್ರಹದ ನಿಖರವಾದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈ 15 ನಸುಕಿನ ಜಾವ 2 ಗಂಟೆ 51 ನಿಮಿಷವನ್ನು ಉಡಾವಣೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ 6 ರಂದು ಎರಡು ಚಂದ್ರನ ಕುಳಿಗಳಾದ ಮ್ಯಾಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ನಡುವಿನ ಎತ್ತರದ ಬಯಲಿನಲ್ಲಿ ಯೋಜಿತ ಸ್ಥಳದಲ್ಲಿ ನಿಖರವಾಗಿ ಇಳಿಯಲು ಲ್ಯಾಂಡರ್ ವಿಕ್ರಮ್ ಗೆ ಇದು ಸಹಾಯ ಮಾಡುತ್ತದೆ. 
ಚಂದ್ರನ ಸುತ್ತ ಧ್ರುವೀಯ ಕಕ್ಷೆಗೆ ಪ್ರವೇಶಿಸಲು ಟಿ +17ನ್ನು ಎಲ್ ಟಿಟಿಇ ಸಿದ್ದಪಡಿಸಿದ್ದು ಇದು ಕಕ್ಷೆಯ ಲೆಕ್ಕಾಚಾರದ ಇಂಧನ ದಕ್ಷತೆಯನ್ನು ಖಚಿತಪಡಿಸುವುದಲ್ಲದೆ, ಮಿಷನ್ ಯಶಸ್ವಿಯಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ಜುಲೈ 20ರ ನಂತರ ಉಡಾವಣೆಯನ್ನು ಮುಂದೂಡಿದರೆ ಲ್ಯಾಂಡರ್‌ನ ಪ್ರತ್ಯೇಕತೆಯನ್ನು ವಿಳಂಬಗೊಳಿಸುತ್ತದೆ, ಜೊತೆಗೆ ಹೆಚ್ಚಿನ ಇಂಧನ ಅಗತ್ಯವಿರುತ್ತದೆ.ಇದರಿಂದ ಚಂದ್ರಯಾನ-2 ಉಪಗ್ರಹದ ಜೀವಿತಾವಧಿ ಕಕ್ಷೆಯಲ್ಲಿ ಕಡಿಮೆಯಾಗಬಹುದು. ಲ್ಯಾಂಡರ್ ಮತ್ತು ರೊಬೊಟಿಕ್ ರೋವರ್ ಕೇವಲ 14 ದಿನಗಳ ಕಾರ್ಯಾಚರಣೆ ಅವಧಿಯನ್ನು ಹೊಂದಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com