ಕ್ಷಿಪಣಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಡಿಆರ್ ಡಿಒ ಮುಖ್ಯಸ್ಥರಿಗೆ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ

ಡಿಆರ್ ಡಿಒ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಭಾರತದಲ್ಲಿ ಕ್ಷಿಪಣಿ ಅಭಿವೃದ್ಧಿಯಲ್ಲಿ ನೀಡಿರುವ ಕೊಡುಗೆಗಾಗಿ ಅಮೆರಿಕಾದ ಎಐಎಎ ಸಂಸ್ಥೆಯಿಂದ 2019ರ ಪ್ರತಿಷ್ಠಿತ ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published: 02nd March 2019 12:00 PM  |   Last Updated: 02nd March 2019 04:55 AM   |  A+A-


Satheesh Reddy

ಸತೀಶ್ ರೆಡ್ಡಿ

Posted By : ABN ABN
Source : ANI
ನವದೆಹಲಿ:ಡಿಆರ್ ಡಿಒ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಭಾರತದಲ್ಲಿ  ಕ್ಷಿಪಣಿ ಅಭಿವೃದ್ಧಿಯಲ್ಲಿ ನೀಡಿರುವ ಕೊಡುಗೆಗಾಗಿ  ಅಮೆರಿಕಾದ ಎಐಎಎ ಸಂಸ್ಥೆಯಿಂದ 2019ರ ಪ್ರತಿಷ್ಠಿತ ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಅನುಷ್ಠಾನವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಎಐಎಎ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಯುದ್ಧ ತಂತ್ರದ ವ್ಯವಸ್ಥೆಗಾಗಿ ಸುಮಾರು 30 ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ  ಆಯ್ಕೆ ಮಾಡಿರುವುದಾಗಿ ಸೂಸೈಟಿ  ಹೇಳಿದೆ.

ಸತೀಶ್ ರೆಡ್ಡಿ ಡಿಆರ್ ಡಿ ಒ ಮುಖ್ಯಸ್ಥರಾಗುವ ಮುನ್ನ ಅಗ್ನಿ ಸರಣಿಯ ಅಣ್ವಸ್ತ್ರ ಪರಮಾಣುಗಳ ಕಾರ್ಯತಂತ್ರ ಕಾರ್ಯಕ್ರಮಗಳು ಸೇರಿದಂತೆ ಇಡೀ ಡಿಆರ್ ಡಿಒದ ಕ್ಷಿಪಣಿ ವಿಭಾಗದ ಮುಖ್ಯಸ್ಥರಾಗಿದ್ದರು. ಭೂಮಿಯಿಂದ ಆಕಾಶಕ್ಕೆ ವೇಗವಾಗಿ ಚಿಮ್ಮುವ ಕ್ಷಿಪಣಿ ವ್ಯವಸ್ಥೆ , ನಾಗ್  ಟ್ಯಾಂಕ್ ವಿರೋಧಿ ಯುದ್ದೋಪಕರಣಗಳ ಅಭಿವೃದ್ಧಿಯಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ.

ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯ ಅಭಿವೃದ್ದಿಯಲ್ಲೂ ಸತೀಶ್  ರೆಡ್ಡಿ ಅವರು ಪ್ರಮುಖವಾದ ಪಾತ್ರ ವಹಿಸಿದ್ದಾರೆ. ಇದರಿಂದಾಗಿ ವಿದೇಶಿ ವಿನಿಮಯ ಉಳಿತಾಯಕ್ಕೆ ನೆರವಾಗಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp