ಏ.1 ರಂದು ಭಾರತದಿಂದ ವಿದ್ಯುನ್ಮಾನ ಗುಪ್ತಚರ ಉಪಗ್ರಹ ಉಡಾವಣೆ: ಒಂದೇ ರಾಕೆಟ್ 3 ಭಿನ್ನ ಕಕ್ಷೆಗಳಿಗೆ ಉಪಗ್ರಹಗಳು!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಏ.1 ರಂದು ವಿದ್ಯುನ್ಮಾನ ಗುಪ್ತಚರ ಉಪಗ್ರಹ ಎಮಿಸ್ಯಾಟ್ ನ್ನು ಉಡಾವಣೆ ಮಾಡಲಿದೆ.
ಏ.1 ರಂದು ಭಾರತದಿಂದ  ವಿದ್ಯುನ್ಮಾನ ಗುಪ್ತಚರ ಉಪಗ್ರಹ ಉಪಗ್ರಹ ಉಡಾವಣೆ: ಒಂದೇ ರಾಕೆಟ್ 3 ಭಿನ್ನ ಕಕ್ಷೆಗಳಿಗೆ ಉಪಗ್ರಹಗಳು!
ಏ.1 ರಂದು ಭಾರತದಿಂದ ವಿದ್ಯುನ್ಮಾನ ಗುಪ್ತಚರ ಉಪಗ್ರಹ ಉಪಗ್ರಹ ಉಡಾವಣೆ: ಒಂದೇ ರಾಕೆಟ್ 3 ಭಿನ್ನ ಕಕ್ಷೆಗಳಿಗೆ ಉಪಗ್ರಹಗಳು!
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಏ.1 ರಂದು ವಿದ್ಯುನ್ಮಾನ ಗುಪ್ತಚರ ಉಪಗ್ರಹ ಎಮಿಸ್ಯಾಟ್ ನ್ನು ಉಡಾವಣೆ ಮಾಡಲಿದೆ.
ಡಿಆರ್ ಡಿಒ ಗಾಗಿ ಎಮಿಸ್ಯಾಟ್ ಉಪಗ್ರಹ ಉಡಾವಣೆಯಾಗಲಿದ್ದು, ಇದರ ಜೊತೆಗೆ 28 ಅಂತಾರಾಷ್ಟ್ರೀಯ ಗ್ರಾಹಕರ ಉಪಗ್ರಹಗಳು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. 
ಹೊಸ ಪಿಎಸ್ಎಲ್ ವಿ ರಾಕೆಟ್ ಮೂಲಕ 3 ಭಿನ್ನ ಕಕ್ಷೆಗಳಿಗೆ ಉಪಗ್ರಹ ಉಡಾವಣೆಯಾಗಲಿದೆ ಎಂದು ಇಸ್ರೋ ಹೇಳಿದೆ. 
ಹೊಸ ಆವೃತ್ತಿಯ ಪಿಎಸ್ ಪಿವಿ ರಾಕೆಟ್ ಮೊದಲು 436 ಕೆಜಿಯ ಎಮಿಸ್ಯಾಟ್ ಉಪಗ್ರಹವನ್ನು 749 ಕಿಮೀ ಕಕ್ಷೆಗೆ ಸೇರಿಸಲಾಗುತ್ತದೆ. 
ಇದಾದ ನಂತರ ರಾಕೇಟ್ 28 ಉಪಗ್ರಹಗಳನ್ನು 504 ಕಿಮೀ ಅಲ್ಟಿಟ್ಯೂಡ್ ಕಕ್ಷಯಲ್ಲಿ ಸೇರಿಸಲಿದೆ. 
ಎಮಿಸ್ಯಾಟ್ ರಾಕೆಟ್ ನ್ನು ಕಕ್ಷೆಗೆ ಸೇರಿಸಿದ ಬಳಿಕ 485 ಕಿಮೀ ನಷ್ಟು ಕೆಳಗೆ ಬರಲಿರುವ ರಾಕೆಟ್ ಉಳಿದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಒಟ್ಟಾರೆ ಪ್ರಕ್ರಿಯೆ ಸುಮಾರು 180 ನಿಮಿಷಗಳ ಕಾಲ ನಡೆಯಲಿದೆ ಎಂದು ಇಸ್ರೋ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com