ಭಾರತದಲ್ಲಿ ನೋಕಿಯಾ 4.2 ಸ್ಮಾರ್ಟ್ ಫೋನ್ ಬಿಡುಗಡೆ

ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2 ಸ್ಮಾರ್ಟ್ ಫೋನ್ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.
ನೋಕಿಯಾ 4.2
ನೋಕಿಯಾ 4.2
ನವದೆಹಲಿ: ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2  ಸ್ಮಾರ್ಟ್ ಫೋನ್ ಅನ್ನು ಮಂಗಳವಾರ  ಭಾರತದಲ್ಲಿ ಬಿಡುಗಡೆ ಮಾಡಿದೆ.
ನೋಕಿಯಾ 4.2 ಹಿಂಬದಿಯಲ್ಲಿ ಎರಡು ಕ್ಯಾಮರಾ, ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್, 5.71 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದರ ಬೆಲೆ 10,990 ರೂಪಾಯಿ. 
ಈ ಸ್ಮಾರ್ಟ್ ಫೋನ್ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ನೋಕಿಯಾ 4.2 ಮೊಬೈಲ್ ಇಂದಿನಿಂದ ನೋಕಿಯಾ ವೆಬ್ಸೈಟ್ ನಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಕ್ರೋಮಾ, ರಿಲಾಯನ್ಸ್, ಸಂಗೀತ, ಪೂರ್ವಿಕಾ, ಬಿಗ್ ಸಿ ಚಿಲ್ಲರೆ ಮಳಿಗೆಯಲ್ಲಿ ನೋಕಿಯಾ 4.2 ಸ್ಮಾರ್ಟ್ಫೋನ್ ಖರೀದಿ ಮಾಡಬಹುದಾಗಿದೆ. ರಿಟೇಲ್ ಸ್ಟೋರ್ ಗಳಲ್ಲಿ ನೋಕಿಯಾ 4.2 ಮೊಬೈಲ್ ಮೇ. 14 ರ ನಂತರ ಲಭ್ಯವಾಗಲಿದೆ.
ಈ ಮೊಬೈಲ್ ಗೆ ನಾಚ್ ಡಿಸ್ಪ್ಲೇ ನೀಡಲಾಗಿದೆ. ಇದರ ಲಾಕ್ ಬಟನ್ ವಿಶೇಷವಾಗಿದೆ. ಜೂನ್ 10 ರವರೆಗೆ ನೋಕಿಯಾ 4.2 ಸ್ಮಾರ್ಟ್ಫೋನ್ ಮೇಲೆ 500 ರೂಪಾಯಿ ರಿಯಾಯಿತಿ ಸಿಗ್ತಿದೆ. ಗ್ರಾಹಕರು ನೋಕಿಯಾ ವೆಬ್ ಸೈಟ್ ಗೆ ಭೇಟಿ ನೀಡಿ LAUNCHOFFER ಪ್ರೋಮೋಕೋಡ್ ಬಳಸಬೇಕಾಗುತ್ತದೆ. ಎಚ್ ಡಿಎಫ್ ಸಿ ಕಾರ್ಡ್ ಮೂಲಕ ಮೊಬೈಲ್ ಖರೀದಿ ಮಾಡಿದರೆ ಶೇ. 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com