ಕೇವಲ ಒಂದೇ ಟ್ವೀಟ್ ಮೂಲಕ ಆಧಾರ್ ನವೀಕರಿಸಿಕೊಳ್ಳೋದು ಹೇಗೆ? ಇಲ್ಲಿದೆ ವಿವರ

ಗ್ರಾಹಕರು ಇನ್ನು ಆಧಾರ್ ಕಾರ್ಡ್ ನಲ್ಲಿನ ಹೆಸರು, ಮಾಹಿತಿ ನವೀಕರಣಕ್ಕೆ ಕೇವಲ ಒಂದು ಟ್ವೀಟ್ ಮಾಡಿದರೆ ಸಾಕು! ಹೌದು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)  ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ  ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಪ್ರಾರಂಭಿಸಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗ್ರಾಹಕರು ಇನ್ನು ಆಧಾರ್ ಕಾರ್ಡ್ ನಲ್ಲಿನ ಹೆಸರು, ಮಾಹಿತಿ ನವೀಕರಣಕ್ಕೆ ಕೇವಲ ಒಂದು ಟ್ವೀಟ್ ಮಾಡಿದರೆ ಸಾಕು! ಹೌದು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)  ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ  ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಪ್ರಾರಂಭಿಸಿದೆ. ಬಳಕೆದಾರರು  ತಮ್ಮ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ.

ಕಾರ್ಡ್‌ನಲ್ಲಿನ ಮಾಹಿತಿಯನ್ನು ನವೀಕರಿಸಲು ಬಯಸುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿರುವ ಯಾರಾದರೂ@Aadhaar_care.ಗೆ ಟ್ವೀಟ್ ಮಡಬಹುದು. ಇದಾಗಲೇ ಈ ಟ್ವಿಟ್ತರ್ ಖಾತೆಗೆ 8,000 ಕ್ಕೂ ಹೆಚ್ಚು ಅನುಯಾಯಿಗಳು (ಫಾಲೋವರ್ಸ್) ಸಿಕ್ಕಿದ್ದಾರೆ. 'ಇದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಆಧಾರ್‌ನ ಅಧಿಕೃತ ಸಹಾಯ ಕೇಂದ್ರ.'

ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ಮತ್ತು ಅವರಿಗೆ ಉತ್ತಮ ಸೇವೆ ಸಲ್ಲಿಸಲು ಯುಐಡಿಎಐ ಈ ಉಪಕ್ರಮವನ್ನು ಪ್ರಾರಂಭಿಸಿದೆ. ಇನ್ನು ಟ್ವಿಟರ್‌ನಲ್ಲಿಲ್ಲದವರು ಯುಐಡಿಎಐನ ಕಾಲ್ ಸೆಂಟರ್ ಸಂಖ್ಯೆ 1947 ಗೆ ಕರೆ ಮಾಡಬಹುದು ಅಥವಾ help@UIDAI.gov.in ಗೆ ಇಮೇಲ್ ಕಳುಹಿಸಬಹುದು.

ತಮ್ಮ ಬಳಕೆದಾರರು / ಗ್ರಾಹಕರೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಳ್ಳುವ ಸಂಸ್ಥೆಗಳ ಸಾಲಿಗೆ ಈಗ ಯುಐಡಿಎಐ ಸಹ ಸೇರಿಕೊಂಡಿದೆ.

ಈ ಹ್ಯಾಂಡಲ್ ಹೇಗೆ ಕೆಲಸ ಮಾಡುತ್ತದೆ?

ಮೊದಲು ಹ್ಯಾಂಡಲ್ ಗೆ ಟ್ಯಾಗ್ ಮಾಡುವ ಮ್ಮ ಪ್ರಶ್ನೆಗಳನ್ನು ನೀವು ಟ್ವೀಟ್ ಮಾಡಬೇಕಾಗುತ್ತದೆ. ಯುಐಡಿಎಐ ಪ್ರತಿನಿಧಿ ನಿಮ್ಮ ಪ್ರಶ್ನಗೆ ಉತ್ತಮ ಉತ್ತರವನ್ನು ಪಡೆಯಲು ಮತ್ತು ಪರಿಹಾರವನ್ನು ಒದಗಿಸಲು ಖಾಸಗಿ ಸಂದೇಶ / ನೇರ ಸಂದೇಶದ ಮೂಲಕ ನಿಮ್ಮೊಂದಿಗೆ ಸಂಪರ್ಕ ಹೊಂದುತ್ತಾರೆ.

ಈ ಅಧಿಕೃತ ಟ್ವಿಟ್ಟರ್ ಖಾತೆಯು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನವೀಕರಿಸುವುದು, ನಿಮ್ಮ ವಿಳಾಸ, ಹುಟ್ಟಿದ ದಿನಾಂಕ ಮುಂತಾದ ಇತರ ಮಾಹಿತಿಯನ್ನು ನವೀಕರಿಸಲು ನೀವು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ನಿಮಗೆ ತಿಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com