ಒಡಿಶಾ: ಅಗ್ನಿ-2 ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

ಒಡಿಶಾ ಕರಾವಳಿಯ ಡಾ.ಅಬ್ದುಲ್ ಕಲಾಂ ದ್ವೀಪದಿಂದ ಮಧ್ಯಮ ಶ್ರೇಣಿಯ ಪರಮಾಣು ಸಾಮರ್ಥ್ಯದ ಅಗ್ನಿ-2 ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಭಾರತ ಮೊದಲ ಸಲ ಯಶಸ್ವಿಯಾಗಿ ನಡೆಸಿದೆ.
ಅಗ್ನಿ-2
ಅಗ್ನಿ-2

ಭುವನೇಶ್ವರ: ಒಡಿಶಾ ಕರಾವಳಿಯ ಡಾ.ಅಬ್ದುಲ್ ಕಲಾಂ ದ್ವೀಪದಿಂದ ಮಧ್ಯಮ ಶ್ರೇಣಿಯ ಪರಮಾಣು ಸಾಮರ್ಥ್ಯದ ಅಗ್ನಿ-2 ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಭಾರತ ಮೊದಲ ಸಲ ಯಶಸ್ವಿಯಾಗಿ ನಡೆಸಿದೆ.


ಕ್ಷಿಪಣಿಯು 2000 ಕಿಲೋ ಮೀಟರ್ ಸ್ಟ್ರೈಕ್ ಶ್ರೇಣಿಯನ್ನು ಹೊಂದಿದ್ದು, ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನ ಲಾಂಚ್ ಕಾಂಪ್ಲೆಕ್ಸ್ -4 ನಲ್ಲಿ ಮೊಬೈಲ್ ಲಾಂಚರ್ ನಿಂದ ಉಡಾವಣೆಗೊಂಡಿತು ಎಂದು ಮೂಲಗಳಿಂದ ತಿಳಿದುಬಂದಿದೆ.


ಅಗ್ನಿ-2, ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಈಗಾಗಲೇ ಸಶಸ್ತ್ರ ಪಡೆಗಳಲ್ಲಿ ಸೇರಿಸಲಾಗಿದೆ.ಅತ್ಯಾಧುನಿಕ ಕ್ಷಿಪಣಿಯನ್ನು ರಾತ್ರಿ ಹೊತ್ತಿನಲ್ಲಿ ಪರೀಕ್ಷಿಸಿದ್ದು ಇದೇ ಮೊದಲ ಸಲ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 


20 ಮೀಟರ್ ಉದ್ದದ ಎರಡು ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿಯು 17 ಟನ್ ಗಳಷ್ಟು ಉಡಾವಣಾ ತೂಕವನ್ನು ಹೊಂದಿದ್ದು 2000 ಕಿ.ಮೀ ದೂರದಲ್ಲಿ 1,000 ಕೆ.ಜಿ.ಗಳ ಪೇಲೋಡ್ ಅನ್ನು ಸಾಗಿಸಬಲ್ಲದಾಗಿದೆ. 


ಅಗ್ನಿ- 2 ಅನ್ನು ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿ ಮತ್ತು ಇತರ ಡಿಆರ್‌ಡಿಒ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಿವೆ. ಅಗ್ನಿ -2 ಅಗ್ನಿ ಸರಣಿಯ ಕ್ಷಿಪಣಿಗಳ ಭಾಗವಾಗಿದ್ದು, ಇದರಲ್ಲಿ 700 ಕಿ.ಮೀ ವ್ಯಾಪ್ತಿಯೊಂದಿಗೆ ಅಗ್ನಿ- 1, 3,000 ಕಿ.ಮೀ ವ್ಯಾಪ್ತಿಯ ಅಗ್ನಿ -3, ಅಗ್ನಿ- 4 ಮತ್ತು ಅಗ್ನಿ-ವಿ ಎರಡೂ ದೀರ್ಘ ವ್ಯಾಪ್ತಿಯ ಸಾಮರ್ಥ್ಯಗಳನ್ನು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com