ಕಾರ್ಟೋಸ್ಯಾಟ್ 3 ಉಡಾವಣೆಗೆ 26 ಗಂಟೆಗಳ ಎಣಿಕೆ ಆರಂಭ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಾರ್ಟೋ ಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್ ಉಪಗ್ರಹಗಳ ಉಡಾವಣೆಗೆ 26 ಗಂಟೆಗಳ ಇಳಿಕೆ ಎಣಿಗೆ ಆರಂಭಿಸಿದೆ. 
ಕಾರ್ಟೋಸ್ಯಾಟ್ 3 ಉಡಾವಣೆಗೆ 26 ಗಂಟೆಗಳ ಎಣಿಕೆ ಆರಂಭ
ಕಾರ್ಟೋಸ್ಯಾಟ್ 3 ಉಡಾವಣೆಗೆ 26 ಗಂಟೆಗಳ ಎಣಿಕೆ ಆರಂಭ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಾರ್ಟೋ ಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್ ಉಪಗ್ರಹಗಳ ಉಡಾವಣೆಗೆ 26 ಗಂಟೆಗಳ ಇಳಿಕೆ ಎಣಿಗೆ ಆರಂಭಿಸಿದೆ. 

ಪಿ ಎಸ್ ಎಲ್ ವಿ ಸಿ 47 ವಾಹಕ ಹೊತ್ತೊಯ್ಯುವ ಉಪಗ್ರಹಗಳ ಉಡಾವಣೆಗೆ ಮಂಗಳವಾರ ಬೆಳಗ್ಗೆ 7 ಗಂಟೆ 28 ನಿಮಿಷಕ್ಕೆ ಇಳಿಕೆ ಎಣಿಕೆ ಆರಂಭವಾಗಿದೆ.  ಬುಧವಾರ ಬೆಳಗ್ಗೆ 9 ಗಂಟೆ 28 ನಿಮಿಷಕ್ಕೆ ಉಡಾವಣೆ ನಿಗದಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದು 74 ನೇ ಉಡಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಟೋ ಸ್ಯಾಟ್ 3 ಉಪಗ್ರಹ ಮೂರನೇ ಪೀಳಿಗೆಯ ಅತ್ಯಾಧುನಿಕ ಉಪಗ್ರಹವಾಗಿದೆ. 509 ಕಿಲೋಮೀಟರ್ ದೂರದಲ್ಲಿನ ಕಕ್ಷೆಯಲ್ಲಿ ಸಮಭಾಜಕ ವೃತ್ತಕ್ಕೆ 97.5 ಡಿಗ್ರಿಯಲ್ಲಿ ಉಪಗ್ರಹವನ್ನು ಇರಿಸಲಾಗುವುದು. ಪಿ ಎಸ್ ಎಲ್ ವಿ ಸಿ 47 ಉಡಾವಣಾ ವಾಹಕ ಅಮೆರಿಕದ 13 ವಾಣಿಜ್ಯ ಬಳಕೆಯ ಉಪಗ್ರಹಗಳನ್ನು ಹೊತ್ತೊಯ್ಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com