ಮೈಕ್ರೋಓವನ್ ಸ್ನೇಹಿ ಮಣ್ಣಿನ ಪಾತ್ರೆ ತಯಾರಿಕೆ: ಕುಂಬಾರರಿಗೆ ಐಐಟಿ ಮದ್ರಾಸ್ ನೆರವು!

ಐಐಟಿ ಮದ್ರಾಸ್ ದೇಶಿ ಸಂಪನ್ಮೂಲಗಳನ್ನೇ ಬಳಸಿಕೊಂಡು ಇಂದಿನ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪನ್ನಗಳ ತಯಾರಿಕೆಗೆ ಮುಂದಾಗಿದೆ.
ಐಐಟಿ ಮದ್ರಾಸ್ ಮಾರ್ಗದರ್ಶನ: ಬರಲಿದೆ ಮೈಕ್ರೋವೇವ್ ಸ್ನೇಹಿ ಮಣ್ಣಿನ ಪಾತ್ರೆ!
ಐಐಟಿ ಮದ್ರಾಸ್ ಮಾರ್ಗದರ್ಶನ: ಬರಲಿದೆ ಮೈಕ್ರೋವೇವ್ ಸ್ನೇಹಿ ಮಣ್ಣಿನ ಪಾತ್ರೆ!

ಚೆನ್ನೈ: ಐಐಟಿ ಮದ್ರಾಸ್ ದೇಶಿ ಸಂಪನ್ಮೂಲಗಳನ್ನೇ ಬಳಸಿಕೊಂಡು ಇಂದಿನ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪನ್ನಗಳ ತಯಾರಿಕೆಗೆ ಮುಂದಾಗಿದೆ. ತಿರುನಲ್ವೇಲಿಯಲ್ಲಿ ಹುಲ್ಲಿನಿಂದ ಚಾಪೆ ತಯಾರಿಸಲು ಕುಶಲಕರ್ಮಿಗಳಿಗೆ ಸಹಾಯ ಮಾಡಿದ್ದ ಐಐಟಿ ಮದ್ರಾಸ್ ಈಗ ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸುವವರಿಗೆ ಸಹಾಯ ಹಸ್ತ ನೀಡಲು ಮುಂದಾಗಿದೆ. 

ಇಂದಿನ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಮಣ್ಣಿನ ಪಾತ್ರೆಗಳನ್ನು ತಯಾರಿಸುವುದಕ್ಕೆ ತಿರುವಳ್ಳೂರ್ ನ ಕುಂಬಾರರ ಕೌಶಲವನ್ನು ಸುಧಾರಣೆ ಮಾಡುವ ಯೋಜನೆಯನ್ನು ಐಐಟಿ ಮದ್ರಾಸ್ ಈಗ ಕೈಗೆತ್ತಿಕೊಂಡಿದೆ. 

ಇದಕ್ಕಾಗಿ ಐಐಟಿಯ ರೂರಲ್ ಟೆಕ್ನಾಲಜಿ ಆಕ್ಷನ್ ಗ್ರೂಪ್ (RuTAG) ತಂಡ ಕಾರ್ಯನಿರ್ವಹಿಸುತ್ತಿದೆ. ಈ ತಂಡ ಮಡಿಕೆ ತಯಾರು ಮಾಡುವವರಿಗೆ, ಇಂದಿನ ಬೇಡಿಕೆಗಳಿಗೆ ತಕ್ಕಂತೆ, ಮೈಕ್ರೋವೇವ್ ಸ್ನೇಹಿ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಕೌಶಲವನ್ನು ಕಲಿಸಿಕೊಡಲಿದ್ದಾರೆ.

ಮೈಕ್ರೋವೇವ್ ಸ್ನೇಹಿ ಮಣ್ಣಿನ ಪಾತ್ರೆಗಳ ತಯಾರಿಕೆಗಾಗಿ ಐಐಟಿ ಮದ್ರಾಸ್ ತಂಡ ಮಣ್ಣಿನ ಸಂಯೋಜನೆಯನ್ನು ತಯಾರಿಸಿದ್ದಾರೆ. ಈ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬೆಂಬಲಿಸಿದ್ದು, ಜಿಲ್ಲೆಯಲ್ಲಿ ಯೋಜನೆಯ ಕಾಮಗಾರಿ ಪ್ರಾರಂಭಿಸುವುದಕ್ಕೆ ಶೆಡ್ ನಿರ್ಮಿಸಲಾಗುತ್ತಿದೆ ಎಂದು RuTAG ನ ಪ್ರೊಫೆಸರ್ ಇನ್ ಚಾರ್ಜ್ ಅಭಿಜಿತ್ ದೇಶಪಾಂಡೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com