ವಿದ್ಯುತ್ ಚಾಲಿತವಾಹನಗರಿಗೊಂದು ಸಿಹಿಸುದ್ದಿ

ಇಂತಹ ಸಮಸ್ಯೆಗಳಿಗಾಗಿಯೇ ಜಪಾನ್ ನ ಟೆಕ್ನೋಪ್ರೋ ಸಂಸ್ಥೆ ವಿದ್ಯುತ್ ವಾಹನ ಹೊಂದಿರುವವರಿಗೆ ಚಾರ್ಜ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿದೆ. ಇತ್ತೀಚೆಗೆ ತೈಲ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ವಾಹನ ಸವಾರರು ವಿದ್ಯುತ್ ಚಾಲಿನ ವಾಹನಗಳ ಮೊರೆ ಹೋಗಿದ್ದಾರೆ.

Published: 26th October 2019 09:40 PM  |   Last Updated: 26th October 2019 09:40 PM   |  A+A-


Posted By : Srinivas Rao BV
Source : UNI

ಬೆಂಗಳೂರು: ಅಯ್ಯೋ ಪೆಟ್ರೋಲ್ ಮುಗಿದುಹೋಯಿತು, ಮಾರ್ಗಮಧ್ಯೆದಲ್ಲಿ ಡಿಸೇಲ್ ಸಿಗ್ತಿಲ್ಲ. ಹೇಗಪ್ಪ ಹೋಗುವುದು? ಏನಪ್ಪ ಮಾಡುವುದು ಎಂದು ವಾಹನ ಸವಾರರು ಗೊಣಗುವುದು ಸಹಜ. ಇಂಧನ ಸಿಗದೇ ಪರದಾಟ ನಡೆಸುವ ಅನುಭವವೂ ವಾಹನ ಸವಾರರದ್ದಾಗಿರುತ್ತದೆ. ಆದರೆ ಇನ್ನುಮುಂದೆ ವಾಹನ ಸವಾರರು ಹೀಗೆ ಚಿಂತೆ ಮಾಡಬೇಕಾಗಿಲ್ಲ.

ಇಂತಹ ಸಮಸ್ಯೆಗಳಿಗಾಗಿಯೇ ಜಪಾನ್ ನ ಟೆಕ್ನೋಪ್ರೋ ಸಂಸ್ಥೆ ವಿದ್ಯುತ್ ವಾಹನ ಹೊಂದಿರುವವರಿಗೆ ಚಾರ್ಜ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿದೆ. ಇತ್ತೀಚೆಗೆ ತೈಲ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ವಾಹನ ಸವಾರರು ವಿದ್ಯುತ್ ಚಾಲಿನ ವಾಹನಗಳ ಮೊರೆ ಹೋಗಿದ್ದಾರೆ. ವಾಹನಗಳಿಗೆ ಚಾರ್ಜಿಂಗ್ ಸಮಸ್ಯೆ ಎದುರಾಗುತ್ತಿತ್ತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡ ಟೆಕ್ನೋಪ್ರೋ ಸಂಸ್ಥೆ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ಚಾರ್ಜಿಂಗ್ ಸೆಂಟರ್ ಗಳನ್ನು ಆರಂಭಿಸಿದೆ.

ಪೆಟ್ರೋಲಿಯಂ ಹಾಗೂ ಜೈವಿಕ ಇಂಧನ ಚಾಲಿತ ವಾಹನಗಳ ಬಳಕೆಯನ್ನು ತಗ್ಗಿಸಿ,ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ. ಜಪಾನಿನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಟೆಕ್ನೋಪ್ರೋ ಜಪಾನ್  ಈನಿಟ್ಟಿನಲ್ಲಿ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp