ವಿಕ್ರಮ್ ಪತ್ತೆಯಾದರೂ ಸಂಪರ್ಕ ಸಾಧ್ಯವಾಗಲ್ವಾ?: ಇಸ್ರೋ ವಿಜ್ಞಾನಿಗಳು ಹೇಳೋದೇನು?

ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳದಲ್ಲಿ ಪತ್ತೆಯಾಗಿದೆ. ಈ ಬೆನ್ನಲ್ಲೆ ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಿ ಚಂದ್ರಯಾನ-2 ಮಿಷನ್ ನ ಬಾಕಿ ಇರುವ ಉದ್ದೇಶವೂ ಈಡೇರಲಿದೆಯಾ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಈ ಬಗ್ಗೆ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. 
ವಿಕ್ರಮ್ ಸಿಕ್ಕಿದರೂ ಲ್ಯಾಂಡಕ್ರ್ ಜೊತೆಗಿನ ಸಂಪರ್ಕ ಸಾಧ್ಯವಾಗಲ್ವಾ?: ಇಸ್ರೋ ವಿಜ್ಞಾನಿಗಳು ಹೇಳೋದೇನು?
ವಿಕ್ರಮ್ ಸಿಕ್ಕಿದರೂ ಲ್ಯಾಂಡಕ್ರ್ ಜೊತೆಗಿನ ಸಂಪರ್ಕ ಸಾಧ್ಯವಾಗಲ್ವಾ?: ಇಸ್ರೋ ವಿಜ್ಞಾನಿಗಳು ಹೇಳೋದೇನು?

ಬೆಂಗಳೂರು: ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳದಲ್ಲಿ ಪತ್ತೆಯಾಗಿದೆ. ಈ ಬೆನ್ನಲ್ಲೆ ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಿ ಚಂದ್ರಯಾನ-2 ಮಿಷನ್ ನ ಬಾಕಿ ಇರುವ ಉದ್ದೇಶವೂ ಈಡೇರಲಿದೆಯಾ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಈ ಬಗ್ಗೆ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. 

ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಪತ್ತೆಯಾಗಿದೆಯಾದರೂ ವಿಜ್ಞಾನಿಗಳು ಹೇಳುವ ಪ್ರಕಾರ ಸಂಪರ್ಕ ಪುನಃ ಸ್ಥಾಪಿಸುವುದು ಕಷ್ಟಸಾಧ್ಯವಂತೆ.  ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸುವುದಕ್ಕೆ 14 ದಿನಗಳ ಕಾಲ ಯತ್ನ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದ್ದರು. ಈಗ ಲ್ಯಾಂಡರ್ ಪತ್ತೆಯಾದ ನಂತರವೂ ಇದೇ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಶಿವನ್. 

ಆದರೆ ಚಂದ್ರಯಾನ-2 ನಲ್ಲಿ ತೊಡಗಿಸಿಕೊಂಡಿರುವ ಹಿರಿಯ ಅಧಿಕಾರಿಯೊಬ್ಬರು ಸಂವಹನ ಮರುಸ್ಥಾಪನೆಯ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದು, ದಿನ ಕಳೆದಂತೆ ಲ್ಯಾಂಡರ್ ಜೊತೆ ಸಂಪರ್ಕ ಸ್ಥಾಪಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಆದರೆ ಸೂಕ್ತ ರೀತಿಯಲ್ಲಿ ಯತ್ನಿಸಿದರೆ, ಲ್ಯಾಂಡರ್ ವಿದ್ಯುತ್ ಉತ್ಪಾದಿಸಿ, ಸೋಲಾರ್ ಪ್ಯಾನಲ್ ಗಳ ಮೂಲಕ ಬ್ಯಾಟರಿಗಳನ್ನು ರಿಚಾರ್ಜ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ. 

ಮತ್ತೋರ್ವ ಇಸ್ರೋ ವಿಜ್ಞಾನಿ ಮಾತನಾಡಿ, ಇಂಪ್ಯಾಕ್ಟ್ ಶಾಕ್ ನಿಂದಾಗಿ ವಿಕ್ರಮ್ ಲ್ಯಾಂಡರ್ ಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com