ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಗೆ ಹಾನಿಯಾಗಿಲ್ಲ: ಇಸ್ರೋ ಮೂಲಗಳು 

ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಗೆ ಹಾರ್ಡ್ ಲ್ಯಾಂಡಿಂಗ್ ನ ಹೊರತಾಗಿಯೂ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿವೆ.

Published: 09th September 2019 04:11 PM  |   Last Updated: 09th September 2019 04:11 PM   |  A+A-


Chandrayaan-2's Vikram Lander in 'single piece' despite hard landing: ISRO sources

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಗೆ ಹಾನಿಯಾಗಿಲ್ಲ: ಇಸ್ರೋ ಮೂಲಗಳು 

Posted By : Srinivas Rao BV
Source : Online Desk

ಬೆಂಗಳೂರು: ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಗೆ ಹಾರ್ಡ್ ಲ್ಯಾಂಡಿಂಗ್ ನ ಹೊರತಾಗಿಯೂ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಲ್ಯಾಂಡರ್ ಯಥಾಸ್ಥಿತಿಯಲ್ಲಿದೆ, ಮುರಿದುಬಿದ್ದಿಲ್ಲ. ಬಾಗಿರುವ ಸ್ಥಿತಿಯಲ್ಲಿ ಲ್ಯಾಂಡರ್ ಪತ್ತೆಯಾಗಿದ್ದು, ಬಾಹ್ಯಾಕಾಶ ಸಂಸ್ಥೆ ಯೋಜಿಸಿದ್ದ ರೀತಿಯಲ್ಲಿ ಲ್ಯಾಂಡ್ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ಲ್ಯಾಂಡರ್ ವಿಕ್ರಮ್ ಗೆ ಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಸಂಪರ್ಕ ಸಾಧ್ಯವಾಗುವ ವರೆಗೆ ಅದರ ಸ್ಥಿತಿಯ ಬಗ್ಗೆ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಇಸ್ರೋ ವಿಜ್ಞಾನಿಗಳು ವಿಕ್ರಮ್ ಜೊತೆ ಸಂಪರ್ಕ ಸಾಧಿಸಲು ನಿರಂತರ ಯತ್ನ ನಡೆಸುತ್ತಿದ್ದು ಇನ್ನೂ 12 ದಿನಗಳ ಕಾಲಾವಕಾಶ ಇದೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp