ಚಂದ್ರಯಾನ-2: ಅನುಮಾನವೇ ಬೇಡ, ಅರ್ಬಿಟರ್ ಕಾರ್ಯ ನಿರ್ವಹಿಸುತ್ತಿದೆ: ಬಾಹ್ಯಾಕಾಶ ತಜ್ಞ ಅಜಯ್ ಲೆಲೆ

ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ-2 ಯೋಜನೆಯ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದೆ ಎಂದರೆ ಅದರ ಕಾರ್ಯ ಕ್ಷಮತೆ ಕುರಿತು ಅನುಮಾನವೇ ಬೇಡ. ಅದು ತನ್ನ ಗುರಿಸಾಧಿಸಿಯೇ ತೀರುತ್ತದೆ ಎಂದು ಖ್ಯಾತ ಬಾಹ್ಯಾಕಾಶ ತಜ್ಞ ಅಜಯ್ ಲೆಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ-2 ಯೋಜನೆಯ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದೆ ಎಂದರೆ ಅದರ ಕಾರ್ಯ ಕ್ಷಮತೆ ಕುರಿತು ಅನುಮಾನವೇ ಬೇಡ. ಅದು ತನ್ನ ಗುರಿಸಾಧಿಸಿಯೇ ತೀರುತ್ತದೆ ಎಂದು ಖ್ಯಾತ ಬಾಹ್ಯಾಕಾಶ ತಜ್ಞ ಅಜಯ್ ಲೆಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿತ್ತು. ಚಂದ್ರನ ಮೇಲ್ಮೈ ಮೇಲೆ ಇಳಿಯಲು ಕೇವಲ 2.1 ಕಿ.ಮೀ ಅಂತರವಿದ್ದಾಗ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಇಡೀ ಯೋಜನೆ ವಿಫಲವಾಯಿತು ಎಂದು ಪಾಕಿಸ್ತಾನ ಸೇರಿದಂತೆ ಅದರ ಪರ ರಾಷ್ಟ್ರಗಳು ಟೀಕಿಸುತ್ತಿವೆ. ಆದರೆ ಅಮೆರಿಕದ ನಾಸಾ, ರಷ್ಯಾದ ಬಾಹ್ಯಾಕಾಶ ಸಂಸ್ಥೆ, ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಗಳು ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿವೆ.

ಏತ್ಮನ್ಮಧ್ಯೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತವಾದ ಬೆನ್ನಲ್ಲೇ ಆರ್ಬಿಟರ್ ಕಾರ್ಯದ ಬಗ್ಗೆಯೂ ಕೆಲವರು ಪ್ರಶ್ನೆ ಮಾಡುತ್ತಿದ್ದು, ಇದಕ್ಕೆ ತಿರುಗೇಟು ನೀಡಿರುವ ಖ್ಯಾತ ಬಾಹ್ಯಾಕಾಶ ತಜ್ಞ ಅಜಯ್ ಲೆಲೆ ಅವರು, ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದ್ದು, ಆರ್ಬಿಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅರ್ಥ. ಅದರ ಕಾರ್ಯ ಕ್ಷಮತೆ ಬಗ್ಗೆ ಅನುಮಾನವೇ ಬೇಡ. ತನಗೆ ವಹಿಸಿರುವ ಕಾರ್ಯವನ್ನು ಆರ್ಬಿಟರ್ ಶೇ.100ರಷ್ಟು ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.

ಅಂತೆಯೇ ಪ್ರಸ್ತುತ ಅರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದ್ದು, ಈಗ ಮುಖ್ಯ ಪ್ರಶ್ನೆ ಎಂದರೆ ಲ್ಯಾಂಡರ್ ಸ್ಥಿತಿ ಹೇಗಿದೆ ಎಂದು.. ಅದು ಕ್ರಾಶ್ ಲ್ಯಾಂಡ್ ಅಗಿದೆಯೋ ಅಥವಾ ಸಾಫ್ಟ್ ಲ್ಯಾಂಡ್ ಆಗಿ ಸಂಪರ್ಕ ಕಡಿತಗೊಂಡಿದೆಯೋ ಈ ಕುರಿತು ನಾವು ದತ್ತಾಂಶ ಸಂಗ್ರಹಿಸಬೇಕು. ಈ ಕುರಿತಂತೆ ಇಸ್ರೋ ಸತತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಜಯ್ ಲೆಲೆ ಹೇಳಿದ್ದಾರೆ.

ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ನೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭಾರತದ ಈ ಮಹತ್ವಾಕಾಂಕ್ಷಿ ಯೋಜವೆ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಆದರೆ ಆರ್ಬಿಟರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಚಂದ್ರನ ಕುರಿತ ಮತ್ತಷ್ಟು ಕೌತುಕಗಳನ್ನು ಜಗತ್ತಿಗೆ ತಿಳಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com