ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ನಿಂದ ಈವರೆಗೂ ಸಂಪರ್ಕ ಸಾಧ್ಯವಾಗಿಲ್ಲ- ಇಸ್ರೋ

ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಲೇ ಸಂಪರ್ಕ ಕಡಿತವಾಗಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ನೊಂದಿಗೆ ಈ ವರೆಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಂದು ಮತ್ತೆ ವಿಕ್ರಮ್ ಲ್ಯಾಂಡರ್ ಸಂಪರ್ಕಿಸುವ ಯತ್ನ ಮಾಡಿದ ಇಸ್ರೋ ವಿಜ್ಞಾನಿಗಳು

ಬೆಂಗಳೂರು: ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಲೇ ಸಂಪರ್ಕ ಕಡಿತವಾಗಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ನೊಂದಿಗೆ ಈ ವರೆಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸ್ಪಷ್ಟಪಡಿಸಿದೆ.

ಇನ್ನು ಕಳೆದ ಭಾನುವಾರ ಮುಂಜಾನೆ ಚಂದ್ರಯಾನ-2 ಮೂಲಕ ಬಾಹ್ಯಾಕಾಶ ರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ಅಲ್ಪ ಹಿನ್ನಡೆಯಾಗಿತ್ತು. ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿಯುವ ಮುನ್ಸೂಚನೆ ನೀಡಿದ್ದ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಅಂತಿಮ ಕ್ಷಣದಲ್ಲಿ ಕಡಿತವಾಗಿತ್ತು. ಲ್ಯಾಂಡಿಂಗ್ ಗೆ ಇನ್ನೂ ಕೇವಲ 2.1 ಕಿಮೀ ಅಂತರವಿದ್ದಾಗ ಸಿಗ್ನಲ್ ಕಡಿತವಾಯಿತು. ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಸತತ ಪರಿಶ್ರಮ ಪಟ್ಟರಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿರುವ ಕುರಿತು ಘೋಷಣೆ ಮಾಡಿದರು.

ಇದಕ್ಕೂ ಮೊದಲು ವಿಕ್ರಮ್ ಲ್ಯಾಂಡರ್ ನ ಒಟ್ಟು ನಾಲ್ಕು ಎಂಜಿನ್ ಗಳನ್ನು ಉರಿಸುವ ಮೂಲಕ ಲ್ಯಾಂಡರ್ ಅನ್ನು ಸುರಕ್ಷಿತ ಲ್ಯಾಂಡಿಂಗ್ ಹಂತಕ್ಕೆ ತರಲಾಗಿತ್ತು. ಆದರೆ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಹಂತದ ತಲುಪುತ್ತಿದ್ದಂತೆಯೇ ನೌಕೆಯ ಸಂಪರ್ಕ ಕಡಿತವಾಯಿತು.

ಇನ್ನು ಲ್ಯಾಂಡರ್ ನೊಂದಿಗೆ ಸಂವಹನ  ಮರಳಿ ಸ್ಥಾಪಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಒಟ್ಟಾರೆ ಚಂದ್ರಯಾನ ಎರಡು ಮತ್ತು ಇದರ ಕಾರ್ಯಚರಣೆಗಾಗಿ ನಡೆಸಿದ ಎಲ್ಲ ವೈಜ್ಞಾನಿಕ ಪ್ರಯತ್ನಗಳು ಶೇ .95 ರಷ್ಟು ಯಶಸ್ಸುಗಳಿಸಿದ್ದು ಅಮೆರಿಕದ ನಾಸಾ ಕೂಡ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com