ಚಂದ್ರಯಾನ-2: ಲ್ಯಾಂಡರ್‌ನೊಂದಿಗೆ ಸಂಪರ್ಕ ಮರುಸ್ಥಾಪನೆ ಸಾಧ್ಯತೆ ಕ್ಷೀಣ

ಭಾರತದ ಚಂದ್ರಯಾನ  -2 ಮಿಷನ್‌ನ ಭಾಗವಾಗಿರುವ ಲ್ಯಾಂಡರ್-ರೋವರ್ 'ವಿಕ್ರಮ್'  ಜತೆಗೆ ಸಂಪರ್ಕ ಮರುಸ್ಥಾಪನೆ ಮಾಡುವ ಇಸ್ರೋ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆ ಕ್ರಮೇಣ ಕ್ಷ್ಣಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತದ ಚಂದ್ರಯಾನ  -2 ಮಿಷನ್‌ನ ಭಾಗವಾಗಿರುವ ಲ್ಯಾಂಡರ್-ರೋವರ್ 'ವಿಕ್ರಮ್'  ಜತೆಗೆ ಸಂಪರ್ಕ ಮರುಸ್ಥಾಪನೆ ಮಾಡುವ ಇಸ್ರೋ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆ ಕ್ರಮೇಣ ಕ್ಷ್ಣಿಸುತ್ತಿದೆ.

ಚಂದ್ರಯಾನ ನೌಕೆ ಚಂದ್ರನಲ್ಲಿ ಇಳಿಯಲು ಇನ್ನೇನು ಕೆಲವೇ ಕಿಮೀ ಇರುವಾಗ ಸಂಪರ್ಕ ಕಡಿತಗೊಂಡಿತ್ತು. 'ವಿಕ್ರಮ್' ಜತೆ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಸತತ ಪ್ರಯತ್ನ ನಡೆಸಿದ್ದರು. 

 ಲ್ಯಾಂಡರ್ ವಿಕ್ರಮ್ ಸೆಪ್ಟೆಂಬರ್ 7ನೇ ತಾರೀಖಿನಿಂದ ಚಂದ್ರನಿಂದ ಕೇವಲ 2.1 ಕಿ.ಮೀ ದೂರದಲ್ಲಿರುವಾಗ ನಿಯಂತ್ರಣ ಕೇಂದ್ರದೊಂದಿಗಿನ ಸಾಂಪರ್ಕ ಕಳೆದುಕೊಂಡಿತು

ಸೆಪ್ಟೆಂಬರ್ 8 ರಂದು, ಚಂದ್ರಯಾನ -2 ಆರ್ಬಿಟರ್ನ ಬೋರ್ಡ್ ಕ್ಯಾಮೆರಾ ಮೂಲಕ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಗುರುತಿಸಲಾಗಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ಹೇಳಿದೆ. ವಿಕ್ರಂ ಹಾರ್ಡ್ ಲ್ಯಾಂಡಿಂಗ್ ಆಗಿದ್ದು ಅದನ್ನು ವಿಶೇಷವಾಗಿ ಸಾಪ್ಟ್ ಲ್ಯಾಂಡಿಂಗ್ ಗಾಗಿ ವಿನ್ಯಾಸಗೊಳಿಸಲಾಗಿತ್ತು. ಇನ್ನು ರೋವರ್  ಒಂದು ಚಂದ್ರ ದಿನದ ಆಯಸ್ಸನ್ನು ಹೊಂದಿದೆ. ಎಂದರೆ ಅದು ಭೂಮಿಯ 14 ದಿನಗಳಿಗೆ ಸಮನಾಗಿದೆ. ಇದರರ್ಥ ವಿಕ್ರಮ್‌ನನ್ನು ಮತ್ತೆ ಜೀವಂತಗೊಳಿಸಲು ಇಸ್ರೋಗೆ ಇದೀಗ ಉಳಿದಿರುವುದು  ಕೇವಲ ಒಂದು ವಾರ ಮಾತ್ರ!

"ಇದೀಗ ದಿನದಿನಕ್ಕೆ ವಿಕ್ರಮ್ ಜತೆಗೆ ಮರುಸಂಪರ್ಕ ಸಾಧಿಸುವುದು ಕಠಿಣವಾಗುತ್ತಾ ಬಂದಿದೆ. ಪ್ರತಿಯೊಂದು ಗಂಟೆ ಗಂಟೆಯಲ್ಲಿಯೂ ಬ್ಯಾಟರಿಯಲ್ಲಿನ ಶಕ್ತಿ ನಶಿಸುತ್ತಾ ಸಾಗಿದೆ.ಹಾಗಾಗಿ ಅದು ಕಾರ್ಯಾಚರಣೆಗೆ ಅಗ್ತ್ಯವಾಗಿರಬೇಕಾದ ಶಕ್ತಿಯನ್ನು ಏನೂ ಉಳಿಸಿಕೊಳ್ಲಲಾರದು." ಇಸ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಪ್ರತಿ ನಿಮಿಷವೂ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.ಹಾಗಾಗಿ ವಿಕ್ರಮ್ ಜತೆಗೆ ಮತ್ತೆ ಸಂಪರ್ಕ ಸಾಧಿಸುವಿಕೆಯ ಸಾಧ್ಯತೆ ತೀರಾ ತೀರಾ ಕಡಿಮೆಯಾಗುತ್ತಾ ಸಾಗಿದೆ"  ಅವರು ಹೇಳಿದರು. ಹಾಗೆಯೇ ಸಂಪರ್ಕ ಮರು ಸ್ಥಾಪಿಸುವ ಸಾಧ್ಯತೆ ಇನ್ನೂ ಇದೆಯೆ ಎಂದು ಕೇಳಲಾಗಿ "ಅದು ಅತ್ಯಂತ ದೂರದ ಸಾಧ್ಯತೆಯಾಗಿ ಕಾಣಿಸುತ್ತಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com