ಮೊಝಿಲಾ ಫೈರ್ ಫಾಕ್ಸ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಮೈಕ್ರೋಸಾಫ್ಟ್ ಎಡ್ಜ್; ಅಗ್ರ ಸ್ಥಾನದಲ್ಲಿ ಗೂಗಲ್ ಕ್ರೋಮ್!

ಜಾಗತಿಕ ಬ್ರೌಸರ್ ಮಾರುಕಟ್ಟೆಯಲ್ಲಿ ಶಿಶು ಎಂದೇ ಪರಿಗಣಿಸಲಾಗಿದ್ದ ಮೈಕ್ರೋಸಾಫ್ಟ್ ಎಡ್ಜ್ ಇದೀಗ ಬ್ರೌಸರ್ ಜಗತ್ತಿನ ದೈತ್ಯ ಮೊಝಿಲಾ ಫೈರ್ ಫಾಕ್ಸ್ ವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.
ಮೊಝಿಲಾ ಫೈರ್ ಫಾಕ್ಸ್-ಮೈಕ್ರೋಸಾಫ್ಟ್ ಎಡ್ಜ್
ಮೊಝಿಲಾ ಫೈರ್ ಫಾಕ್ಸ್-ಮೈಕ್ರೋಸಾಫ್ಟ್ ಎಡ್ಜ್

ಸ್ಯಾನ್ ಫ್ರಾನ್ಸಿಸ್ಕೋ: ಜಾಗತಿಕ ಬ್ರೌಸರ್ ಮಾರುಕಟ್ಟೆಯಲ್ಲಿ ಶಿಶು ಎಂದೇ ಪರಿಗಣಿಸಲಾಗಿದ್ದ ಮೈಕ್ರೋಸಾಫ್ಟ್ ಎಡ್ಜ್ ಇದೀಗ ಬ್ರೌಸರ್ ಜಗತ್ತಿನ ದೈತ್ಯ ಮೊಝಿಲಾ ಫೈರ್ ಫಾಕ್ಸ್ ವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.

ನೆಟ್ ಮಾರ್ಕೆಟ್ ಶೇರ್ ಬಿಡುಗಡೆ ಮಾಡಿರುವ ಜುಲೈ ತಿಂಗಳ ದತ್ತಾಂಶಗಳ ಅನ್ವಯ ಮೈಕ್ರೋಸಾಫ್ಟ್ ಎಡ್ಜ್, 2ನೇ ಸ್ಥಾನದಲ್ಲಿದ್ದ ಮೊಝಿಲಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಪಟ್ಟಿಯಲ್ಲಿ ಶೇ.1ರಷ್ಟು ಮಾರ್ಕೆಟ್ ಷೇರು ಹೊಂದಿರುವ ಗೂಗಲ್ ಕ್ರೋಮ್ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಈ ಪಟ್ಟಿಯಲ್ಲಿ ಕ್ರೋಮಿಯಮ್ ಮೂಲದ ಎಡ್ಜ್ ಶೇ.8.09ರಷ್ಟು ಮಾರ್ಕೆಟ್ ಷೇರು ಪ್ರಮಾಣ ಹೊಂದುವ ಮೂಲಕ 2ನೇ ಸ್ಥಾನಕ್ಕೇರಿದೆ. ಫೈರ್ ಫಾಕ್ಸ್ ಶೇ.7.36ರಷ್ಟು ಷೇರು ಪ್ರಮಾಣದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಉಳಿದಂತೆ ಇಂಟರ್ನೆಟ್ ಎಕ್ಸ್ ಪ್ಲೋರರ್ ಶೇ.4.23ರಷ್ಟು ಷೇರು ಹೊಂದಿದ್ದು, ಸಫಾರಿ ಶೇ.3.36 ರಷ್ಚು ಷೇರು ಹೊಂದಿದೆ. ವರ್ಷಗಳ ಕಾಲ ಗೂಗಲ್ ಕ್ರೋಮ್ ಗೆ ಬಲಿಷ್ಠ ಪೈಪೋಟಿ ನೀಡಿದ್ದ ಫೈರ್ ಫಾಕ್ಸ್ ಇದೀಗ ಮೈಕ್ರೋಸಾಫ್ಟ್ ಎಡ್ಜ್ ಎದುರಿನ ಪೈಪೋಟಿಯಲ್ಲಿ ಕುಸಿತಕಂಡಿದೆ.

ಕಳೆದ ಮೇ ತಿಂಗಳಲ್ಲಿ ನಡೆದ ಮೈಕ್ರೋಸಾಫ್ಟ್ ಬಿಲ್ಡ್ ನ ವಾರ್ಷಿಕ ಸಭೆಯಲ್ಲಿ ಸಂಸ್ಥೆ ಎಡ್ಜ್ ನ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿತ್ತು. ಪ್ರಮುಖವಾಗಿ ವಿಂಡೋಸ್ 10 ಗ್ರಾಹಕರಿಗೆ ಮೈಕ್ರೋಸಾಫ್ಟ್ ದತ್ತಾಂಶಗಳನ್ನು ಸಂರಕ್ಷಿಸುವ ಫೀಚರ್ ನೀಡಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com