ಕೋವಿಡ್-19 ಕಾರಣದಿಂದ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ವಿಳಂಬ

ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನ್ಯಾನ್ ಕೋವಿಡ್-19 ಕಾರಣದಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ.
ಇಸ್ರೋ ಅಧ್ಯಕ್ಷ ಕೆ ಶಿವನ್
ಇಸ್ರೋ ಅಧ್ಯಕ್ಷ ಕೆ ಶಿವನ್

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನ್ಯಾನ್ ಕೋವಿಡ್-19 ಕಾರಣದಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ.

ಗಗನ್ ಯಾನ್ ನ ಯೋಜನೆಯ ಪ್ರಕಾರ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಗೂ ಮುನ್ನ 2 ಮಾನವ ರಹಿತ ಬಾಹ್ಯಾಕಾಶ ಯೋಜನೆ ನಡೆಯಲಿದೆ. ಈ ಹಿಂದಿನ ಯೋಜನೆಗಳ ಪ್ರಕಾರ ಮಾನವ ರಹಿತ ಬಾಹ್ಯಾಕಾಶ ಯೋಜನೆ ಡಿ.2020 ಹಾಗೂ 2021 ರ ಜುಲೈ ನಲ್ಲಿ ಚಾಲನೆ ಪಡೆದುಕೊಂಡು 2021 ರ ಡಿಸೆಂಬರ್ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಚಾಲನೆ ಪಡೆದುಕೊಳ್ಳಬೇಕಿತ್ತು.

ಇವು ಕೋವಿಡ್-19 ಕಾರಣದಿಂದಾಗಿ ವಿಳಂಬವಾಗಲಿವೆ ಎಂದು ಇಸ್ರೋ ಅಧ್ಯಕ್ಷ ಕೈಲಾಸವಡಿವೂ ಶಿವನ್ ಹೇಳಿದ್ದಾರೆ. ಈಗ ಬದಲಾದ ಯೋಜನೆಯ ಪ್ರಕಾರ ಮಾನವ ರಹಿತ ಬಾಹ್ಯಾಕಾಶ ಯಾನದ ಎರಡು ಯೋಜನೆಗಳನ್ನು ಮುಂದಿನ ವರ್ಷ ಅಥವಾ 2022 ಕ್ಕೆ ಚಾಲನೆ ನೀಡುವ ಗುರಿ ಹೊಂದಿದ್ದೇವೆ ಎಂದು ಶಿವನ್ ತಿಳಿಸಿದ್ದಾರೆ. 

ಕೆಳಮಟ್ಟದ ಭೂ ಕಕ್ಷೆಯ (ಎಲ್‌ಇಒ) ಯಲ್ಲಿ ಮೂರು ಮಂದಿ ಗಗನ ಯಾತ್ರಿಗಳ ತಂಡವನ್ನು ಬಾಹ್ಯಾಕಾಶಕ್ಕೆ ಕಳಿಸಿ ವಾಪಸ್ ಸುರಕ್ಷಿತವಾಗಿ ಕರೆಸಿಕೊಳ್ಳುವ ಯೋಜನೆ ಗಗನ್ ಯಾನ್ ನದ್ದಾಗಿದೆ.

ಗಗನ್ ಯಾನ್ ಮಿಷನ್ ಗಾಗಿ ಜಿಎಸ್ಎಲ್ ವಿ ಎಂಕೆ-III ನ್ನು ಗುರುತು ಮಾಡಲಾಗಿದ್ದು, ರಾಕೆಟ್ ನ ಮಾನವ ರೇಟಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಸ್ರೋ ಕಳೆದ ತಿಂಗಳು ಹೇಳಿತ್ತು. ಹೈ ಥ್ರಸ್ಟ್ ಸಾಲಿಡ್ ಪ್ರೊಪೆಲ್ಲಂಟ್ ಸ್ಟ್ರಾಪ್-ಆನ್ ಬೂಸ್ಟರ್ ಎಸ್ 200 ಮಾನವ ಸಹಿತ ಬಾಹ್ಯಾಕಾಶ ಜಿಎಸ್ಎಲ್ ವಿ-ಎಂಕೆ-III ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com