ಐತಿಹಾಸಿಕ ದಾಖಲೆ ನಿರ್ಮಿಸಿದ ನಾಸಾ ಮಹಿಳಾ ಗಗನಯಾತ್ರಿ!

ನಾಸಾದ ಕ್ರಿಸ್ಟಿನಾ ಕೋಚ್ ಎಂಬ ಗಗನಯಾತ್ರಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಮಹಿಳಾ ಗಗನಯಾತ್ರಿಯ ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 

ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣನಿಂದ ಭೂಮಿಗೆ ಗಗನಯಾತ್ರಿಗಳು ವಾಪಸ್ಸಾಗಿದ್ದಾರೆ. ಈ ಗಗನಯಾತ್ರಿಗಳ ತಂಡದಲ್ಲಿ ನಾಸಾದ ಕ್ರಿಸ್ಟಿನಾ ಕೋಚ್ ಕೂಡ ಒಬ್ಬರಾಗಿದ್ದರು. ಅತಿ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ ಭೂಮಿಗೆ ಬಂದಿರುವ ಮಹಿಳಾ ಗಗನಯಾತ್ರಿಯೆಂಬುದು ಈಕೆ ನಿರ್ಮಿಸಿರುವ ಐತಿಹಾಸಿಕ ದಾಖಲೆ.

ಇದಕ್ಕೂ ಮುನ್ನ 2019 ರ ಡಿಸೆಂಬರ್ ನ 28 ರಲ್ಲಿ ನಾಸಾದ ಪೆಗ್ಗಿ ವಿಟ್ಸನ್ ಎಂಬುವವರು 289 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ ಭೂಮಿಗೆ ಬಂದಿದ್ದರು. 328 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ಸಾಗುವ ಮೂಲಕ ಈ ದಾಖಲೆಯನ್ನು ಮಿಚಿಗನ್ ಮೂಲದ 41 ವರ್ಷದ ಇಂಜಿನಿಯರ್ ಕ್ರಿಸ್ಟಿನಾ ಕೋಚ್ ಮುರಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com