ತಮಿಳುನಾಡಿನಲ್ಲಿ 2ನೇ ಉಡಾವಣಾ ಕೇಂದ್ರ ಸ್ಥಾಪನೆ

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಂತೆಯೇ ತಮಿಳುನಾಡಿನಲ್ಲೂ ಸುಸಜ್ಜಿತ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಂತೆಯೇ ತಮಿಳುನಾಡಿನಲ್ಲೂ ಸುಸಜ್ಜಿತ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಅವರು, ' ಕೇಂದ್ರ ಸರ್ಕಾರ ಹೊಸದಾಗಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ತನ್ನ ಎರಡನೇ ಉಡಾವಣಾ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಭಾರತ ಒಂದಕ್ಕಿಂತ ಹೆಚ್ಚು ಉಪಗ್ರಹ ಉಡಾವಣಾ ಕೇಂದ್ರ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ. ಈ ಪ್ರಸ್ತಾವಿತ ಯೋಜನೆಗಾಗಿ ಇಸ್ರೋ ಒಟ್ಟು 2,300 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಭಾರತದ ಎರಡನೇ ಬಾಹ್ಯಾಕಾಶ ಬಂದರು ಸ್ಥಾಪನೆಗೆ ತೂತುಕುಡಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ತೂತುಕುಡಿ ಬಾಹ್ಯಾಕಾಶ ಬಂದರು ಮುಖ್ಯವಾಗಿ ಹೊಸದಾಗಿ ಅಭಿವೃದ್ಧಿಪಡಿಸಿದ ಚಿಕ್ಕ ಉಪಗ್ರಹ ಉಡಾವಣಾ ವಾಹನಗಳ (ಎಸ್‌ಎಸ್‌ಎಲ್‌ವಿ ಅಥವಾ ಮಿನಿ-ಪಿಎಸ್‌ಎಲ್‌ವಿ) ಉಡಾವಣೆಗೆ ಬಳಕೆಯಾಗಲಿದೆ. ಆರಂಭಿಕ ಹಂತದಲ್ಲಿ ಎಸ್‌ಎಸ್‌ಎಲ್‌ವಿಗಳು ಕೂಡಾ ಶ್ರೀಹರಿ ಕೋಟಾದಿಂದ ಉಡಾವಣೆಯಾಗಲಿವೆ. ಆದರೆ ಎರಡನೇ ಬಾಹ್ಯಾಕಾಶ ಬಂದರು ಸಿದ್ಧವಾಗುತ್ತಿದ್ದಂತೆ ಎಸ್‌ಎಸ್‌ಎಲ್‌ವಿ ಉಡಾವಣೆಯನ್ನು ಅಲ್ಲಿಗೆ ವರ್ಗಾಯಿಸಲಾಗುತ್ತದೆ. ಕಡಿಮೆ ಪೇಲೋಡ್ ಸಾಮರ್ಥ್ಯದ ಅಂದರೆ 500 ಕೆಜಿ ಸಾಮರ್ಥ್ಯದ ಮೊಟ್ಟಮೊದಲ ಎಸ್‌ಎಸ್‌ಎಲ್‌ವಿ ಉಡಾವಣೆ 2020ರ ಮೊದಲ ತ್ರೈಮಾಸಿಕದಲ್ಲಿ ನಡೆಯಲಿದೆ. ಬೇಡಿಕೆಯನ್ನು ಆಧರಿಸಿ ಉಳಿದ ರಾಕೆಟ್‌ಗಳನ್ನು ಪ್ರಸ್ತಾವಿತ ಬಾಹ್ಯಾಕಾಶ ಬಂದರಿನಿಂದ ಉಡಾಯಿಸಲಾಗುವುದು ಎಂದು ಹೇಳಿದ್ದಾರೆ. ನೇರ ದಕ್ಷಿಣಮುಖಿ ಉಡಾವಣೆಗಳು ತಮಿಳುನಾಡಿನ ಕೇಂದ್ರದಿಂದ ಸಾಧ್ಯವಾಗಲಿದೆ. ನೇರ ಮಾರ್ಗದ ಕಾರಣದಿಂದ ಹೆಚ್ಚಿನ ಪೇಲೋಡ್ ಒಯ್ಯಬಹುದಾಗಿದೆ. ಇದೀಗ ಶ್ರೀಹರಿ ಕೋಟಾದಿಂದ ರಾಕೆಟ್‌ಗಳನ್ನು ದಕ್ಷಿಣಾಭಿಮುಖವಾಗಿ ಉಡಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

2019ನೇ ಸಾಲಿನಲ್ಲಿ ನಾವು ವಿಸ್ತರಣೆ ಯೋಜನೆ ಮತ್ತು ಸಾಮರ್ಥ್ಯ ನಿರ್ಮಿಸುವ ಮತ್ತು ಔಟ್ ರೀಚ್ ಕಾರ್ಯಕ್ರಮಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಭಾಗಶಃ ಯಶಸ್ವಿಯಾದ ಚಂದ್ರಯಾನ –2 ಯೋಜನೆಗೆ ವಿಶ್ವಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ ಎಂದರು. " ಎಂದು ಹೇಳಿದ್ದಾರೆ. ಪ್ರಮುಖ ಬಾಹ್ಯಾಕಾಶ ಚಟುವಟಿಕೆ ನಡೆಸುತ್ತಿರುವ ದೇಶಗಳು ಒಂದಕ್ಕಿಂತ ಹೆಚ್ಚು ರಾಕೆಟ್ ಉಡಾವಣಾ ಕೇಂದ್ರಗಳನ್ನು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com