ದಕ್ಷಿಣ ಕನ್ನಡದಲ್ಲಿ ಬಾಹ್ಯಾಕಾಶಕ್ಕಾಗಿ ಇಸ್ರೋ ಶೈಕ್ಷಣಿಕ ಕೇಂದ್ರ 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದಕ್ಷಿಣ ಕನ್ನಡದ ಸುರತ್ಕಲ್ ನ (ಎನ್ಐಟಿಕೆ)ಯಲ್ಲಿ ಬಾಹ್ಯಾಕಾಶಕ್ಕಾಗಿ ಪ್ರಾದೇಶಿಕ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.  
ದಕ್ಷಿಣ ಕನ್ನಡದಲ್ಲಿ ಬಾಹ್ಯಾಕಾಶಕ್ಕಾಗಿ ಇಸ್ರೋ ಶೈಕ್ಷಣಿಕ ಕೇಂದ್ರ
ದಕ್ಷಿಣ ಕನ್ನಡದಲ್ಲಿ ಬಾಹ್ಯಾಕಾಶಕ್ಕಾಗಿ ಇಸ್ರೋ ಶೈಕ್ಷಣಿಕ ಕೇಂದ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದಕ್ಷಿಣ ಕನ್ನಡದ ಸುರತ್ಕಲ್ ನ (ಎನ್ಐಟಿಕೆ)ಯಲ್ಲಿ ಬಾಹ್ಯಾಕಾಶಕ್ಕಾಗಿ ಪ್ರಾದೇಶಿಕ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
 
ಇಸ್ರೋದ ಬಾಹ್ಯಾಕಾಶ ಯೋಜನೆಗಳ ಅಗತ್ಯಗಳನ್ನು ಪೂರೈಸುವುದಕ್ಕೆ ಈ ಪ್ರಾದೇಶಿಕ ಕೇಂದ್ರ ಬಾಹ್ಯಾಕಾಶ ತಂತ್ರಜ್ಞಾನ ಅನ್ವಯಿಕೆಗಳ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ನಡೆಸಲಿದೆ ಎಂದು ಇಸ್ರೋದ ಅಧಿಕಾರಿ ಪಿ.ವಿ ವೆಂಕಟಕೃಷ್ಣನ್ ಹೇಳಿದ್ದಾರೆ. 

ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಪ್ರಚಾರ ಚಟುವಟಿಕೆಗಳಿಗಾಗಿ ಎನ್ ಐ ಟಿಗೆ ಇಸ್ರೋದಿಂದ ವಾರ್ಷಿಕ 2 ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಈ ಸಂಬಂಧ ಬಾಹ್ಯಾಕಾಶ ಸಂಸ್ಥೆ ಹಾಗೂ ಇಂಜಿನಿಯರಿಂಗ್ ಇಸ್ಟಿಟ್ಯೂಟ್ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com