ಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 1 ರಂದು 4,200 ಕಿ.ಮೀ ದೂರದಿಂದ ಮಂಗಳನ ನಿಗೂಢ ಚಂದ್ರ- ಫೋಬೊಸ್‌ನ ಚಿತ್ರವನ್ನು ಸೆರೆಹಿಡಿದಿದೆ. ಆನ್‌ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಬಳಸಿ ಈ ಚಂಂದ್ರನ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 

Published: 05th July 2020 07:28 AM  |   Last Updated: 05th July 2020 07:30 AM   |  A+A-


Posted By : Raghavendra Adiga
Source : The New Indian Express

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 1 ರಂದು 4,200 ಕಿ.ಮೀ ದೂರದಿಂದ ಮಂಗಳನ ನಿಗೂಢ ಚಂದ್ರ- ಫೋಬೊಸ್‌ನ ಚಿತ್ರವನ್ನು ಸೆರೆಹಿಡಿದಿದೆ. ಆನ್‌ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಬಳಸಿ ಈ ಚಂಂದ್ರನ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 

ಇಸ್ರೋದ ಮೊದಲ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿದ್ದ ಆರ್ಬಿಟರ್ ಸೆಪ್ಟೆಂಬರ್ 2014 ರಿಂದ ಮಂಗಳನ ಸುತ್ತ ಸುತ್ತುತ್ತಿದೆ. . ಎಂಸಿಸಿ ಕ್ಯಾಮೆರಾ ಮಂಗಳ ಗ್ರಹವನ್ನು ಸುತ್ತುವ ಎರಡು ಚಂದ್ರಗಳಾದ ಫೋಬೊಸ್ ಮತ್ತು ಡೀಮೋಸ್ ಅನ್ನು ಇತರ ಪ್ರಮುಖ ಉದ್ದೇಶಗಳೊಂದಿಗೆ ಪರೀಕ್ಷೆಗೆ ಒಳಪಡಿಸಲಿದೆ. 

"ಫೋಬೋಸ್‌ನ ಚಿತ್ರವನ್ನು ಸೆರೆಹಿಡಿದ ಮೊದಲ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಲ್ಲವಾದರೂ, ಇದು ಖಂಡಿತವಾಗಿಯೂ ಒಂದು ಸಾಧನೆ ಎನ್ನುವುದು ಸತ್ಯ. ಏಕೆಂಡರೆ ಚಂದ್ರನು ಸೌರಮಂಡಲದ ಅತ್ಯಂತ ಕಡಿಮೆ ಪ್ರತಿಫಲಿತ ಭಾಗಗಳಲ್ಲಿ ಒಂದಾಗಿದೆ.  "ಇದರರ್ಥ," ಕಾರ್ಬೊನೇಸಿಯಸ್ ಕೊಂಡ್ರೈಟ್ಸ್ "ನಂತಹ ಉಲ್ಕಾಶಿಲೆ ವಸ್ತುಗಳಿಂದ ಮಾಡಲ್ಪಟ್ಟಿದೆ. ಈ  ಚಂದ್ರನು ಸೌರ ಬೆಳಕನ್ನು ಪ್ರತಿಬಿಂಬಿಸುವುದಿಲ್ಲ, ಇದು ಇತರ ಆಕಾಶಕಾಯಗಳಿಗೆ ಹೋಲಿಸಿದರೆ ಸ್ವಭಾವತಃ ಕಡಿಮೆ ಗೋಚರಿಸುತ್ತದೆ"  ಇಸ್ತೋದ ವಿಜ್ಞಾನಿ ಯೊಬ್ಬರು ಹೇಳಿದ್ದಾರೆ.

 

 

ಮೂರು ಬಣ್ಣಗಳ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಸೆರೆಹಿಡಿದ ಆರು ವಿಭಿನ್ನ ಫ್ರೇಮ್‌ಗಳನ್ನು ಬಾಹ್ಯಾಕಾಶ ಸಂಸ್ಥೆ ಪಡೆದಿದ್ದು ಇದು ವಾಸ್ತವ ಕ್ಕೆ ಹೆಚ್ಚು ಹತ್ತಿರವಾಗುವಂತೆ ಕಾಣಲು ಕೆಲ ಮಟ್ಟಿನ ಹೊಂದಾಣಿಕೆ ಮಾಡಿದೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp