ಕೋವಿಡ್-19 ನಿಂದ ಭೂಮಿಯ ಕಂಪನದ ಪ್ರಮಾಣ ದಾಖಲೆಯ ಇಳಿಕೆ!

ಕೋವಿಡ್-19 ಲಾಕ್ ಡೌನ್ ನಿಂದಾಗಿ ಪರಿಸರದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಉಂಟಾಗಿದ್ದು, ಇತ್ತೀಚಿನ ವರದಿಯ ಪ್ರಕಾರ ಸೈಸ್ಮಿಕ್ ನಾಯ್ಸ್ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಕೋವಿಡ್-19 ನಿಂದ ಭೂಮಿಯ ಕಂಪನದ ಪ್ರಮಾಣ ದಾಖಲೆಯ ಇಳಿಕೆ!
ಕೋವಿಡ್-19 ನಿಂದ ಭೂಮಿಯ ಕಂಪನದ ಪ್ರಮಾಣ ದಾಖಲೆಯ ಇಳಿಕೆ!

ಲಂಡನ್: ಕೋವಿಡ್-19 ಲಾಕ್ ಡೌನ್ ನಿಂದಾಗಿ ಪರಿಸರದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಉಂಟಾಗಿದ್ದು, ಇತ್ತೀಚಿನ ವರದಿಯ ಪ್ರಕಾರ ಸೈಸ್ಮಿಕ್ ನಾಯ್ಸ್ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

117 ರಾಷ್ಟ್ರಗಳಲ್ಲಿ ನದೆದಿರುವ ಸಂಶೋಧನೆಯ ಪ್ರಕಾರ ಪ್ರಪಂಚದಾದ್ಯಂತ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಸೈಸ್ಮಿಕ್ ನಾಯ್ಸ್ ಕಡಿಮೆಯಾಗಿದೆ. 

ಸೈಸ್ಮೋ ಮೀಟರ್ ಗಳ ಸಹಾಯದಿಂದ ಭೂಮಿಯ ಒಳಗಡೆಯ ಕಂಪನಗಳಿಂದ ಉಂಟಾಗುವ ಸೈಸ್ಮಿಕ್ ನಾಯ್ಸ್ ನ್ನು ಮಾಪನ ಮಾಡಲಾಗಿದೆ. ಭೂಕಂಪನ, ಜ್ವಾಲಾಮುಖಿ, ಬಾಂಬ್ ಗಳಷ್ಟೇ ಅಲ್ಲದೇ ಸಾರಿಗೆ ಹಾಗೂ ಕೈಗಾರಿಕೆಗಳಂತಹ ಮಾನವ ಚಟುವಟಿಕೆಗಳಿಂದಲೂ ಸೈಸ್ಮಿಕ್ ನಾಯ್ಸ್ ಉಂಟಾಗುತ್ತದೆ.

ಈಗ ಸೈಸ್ಮಿಕ್ ನಾಯ್ಸ್ ಕಡಿಮೆಯಾಗಿರುವುದಕ್ಕೆ ಕೋವಿಡ್-19 ರಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಲಾಕ್ ಡೌನ್ ಹಾಗೂ ತತ್ಪರಿಣಾಮವಾಗಿ ಕೈಗಾರಿಕೆ, ಸಾರಿಗೆ ಸೇರಿದಂತೆ ಅನೇಕ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಕಾರಣ ಎನ್ನಲಾಗುತ್ತಿದೆ. 

ರಾಯಲ್ ಅಬ್ಸರ್ವೇಟರಿ ಆಫ್ ಬೆಲ್ಜಿಯಮ್ ಹಾಗೂ ಇತರ 5 ಸಂಸ್ಥೆಗಳು ಜೊತೆಗೂಡಿ ನಡೆಸಿರುವ ಈ ಸಂಶೋಧನೆಯ ವರದಿ ಜರ್ನಲ್ ಸೈನ್ಸ್ ನಲ್ಲಿ ಪ್ರಕಟಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com