ಟೆಲಿಗ್ರಾಮ್ ಮೂಲಕ ಇನ್ನು ಮುಂದೆ 2 ಜಿಬಿವರೆಗಿನ ಫೈಲ್ಸ್ ಕಳಿಸಲು ಸಾಧ್ಯ!

ಸೋಶಿಯಲ್ ಮೆಸೇಜಿಂಗ್ ಆ್ಯಪ್‌ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್ ನಲ್ಲಿ ಹಲವು ಸೌಲಭ್ಯಗಳನ್ನು ನೀಡಿದೆ.
ಟೆಲಿಗ್ರಾಂ ಮೆಸೆಂಜರ್ ಲೋಗೋ
ಟೆಲಿಗ್ರಾಂ ಮೆಸೆಂಜರ್ ಲೋಗೋ

ಸೋಶಿಯಲ್ ಮೆಸೇಜಿಂಗ್ ಆ್ಯಪ್‌ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್ ನಲ್ಲಿ ಹಲವು ಸೌಲಭ್ಯಗಳನ್ನು ನೀಡಿದೆ.

ಪ್ರೊಫೈಲ್ ವಿಡಿಯೋ ಅಪ್ ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು ಅಷ್ಟೇ ಅಲ್ಲದೇ 2 ಜಿಬಿ ವರೆಗಿನ ಫೈಲ್ ಗಳನ್ನು ಕಳಿಸುವ ಸೌಲಭ್ಯ ನೀಡಲಾಗಿದೆ.

ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್ ಗಳು ಬರುತ್ತಿದ್ದರೆ ಪ್ರೈವೆಸಿ ಹಾಗೂ ಸೆಕ್ಯುರಿಟಿ ಸೆಟಿಂಗ್ಸ್ ಮೂಲಕ ಸ್ವಯಂಚಾಲಿತವಾಗಿ ಅವುಗಳನ್ನು ತಡೆಯುವ ಅಥವಾ ಮ್ಯೂಟ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. 

ಅಷ್ಟೇ ಅಲ್ಲದೇ 500 ಸದಸ್ಯರಿರುವ ಗ್ರೂಪ್ ನ ಸದಸ್ಯರು ಗ್ರೂಪ್ ಸ್ಟಾಟ್ಸ್ ಗಳನ್ನು ನೋಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com