ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾದಿಂದ ಅತ್ಯಾಧುನಿಕ ಮಾರ್ಸ್ ರೋವರ್ ಉಡಾವಣೆ 

ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾ ಅತಿ ದೊಡ್ಡ, ಅತ್ಯಾಧುನಿಕ ಮಾರ್ಸ್ ರೋವರ್ ನ್ನು ಉಡಾವಣೆ ಮಾಡಿದೆ. 
ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾದಿಂದ ಅತ್ಯಾಧುನಿಕ ಮಾರ್ಸ್ ರೋವರ್ ಉಡಾವಣೆ
ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾದಿಂದ ಅತ್ಯಾಧುನಿಕ ಮಾರ್ಸ್ ರೋವರ್ ಉಡಾವಣೆ

ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾ ಅತಿ ದೊಡ್ಡ, ಅತ್ಯಾಧುನಿಕ ಮಾರ್ಸ್ ರೋವರ್ ನ್ನು ಉಡಾವಣೆ ಮಾಡಿದೆ. 

ಒಂದು ಕಾರಿನ ಗಾತ್ರದಲ್ಲಿ ಈ ಅತ್ಯಾಧುನಿಕ ಮಾರ್ಸ್ ರೋವರ್ ನ್ನು ತಯಾರಿಸಲಾಗಿದ್ದು, ಕ್ಯಾಮರಾ, ಮೈಕ್ರೋಫೋನ್ ಗಳಾ ಜೊತೆಗೆ, ಮಂಗಳ ಗ್ರಹದಿಂದ ಬಂಡೆ, ಕಲ್ಲುಗಳ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರಲು ಡ್ರಿಲ್ ಹಾಗೂ ಲೇಸರ್ ಗಳನ್ನೂ ಹೊಂದಿದೆ. .

ಮಂಗಳ ಗ್ರಹದಿಂದ ಭೂಮಿಗೆ ಲಭ್ಯವಾಗುವ ಈ ಕಲ್ಲು-ಬಂಡೆಗಳ ಮಾದರಿಯನ್ನಿಟ್ಟುಕೊಂಡು ಪ್ರಾಚೀನ ಜೀವ ಸಂಕುಲದ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಚೀನಾ ಹಾಗೂ ಯುನೈಟೆಡ್ ಅರಬ್ ಎಮಿರೈಟ್ಸ್ ಕಳೆದ ವಾರ ಅತ್ಯಾಧುನಿಕ ಒಂದು ಮಂಗಳಯಾನ ನೌಕೆಯನ್ನು ಉಡಾವಣೆ ಮಾಡಿದ್ದವು, ಈಗ ನಾಸಾ ಉಡಾವಣೆ ಮಾಡಿರುವುದು ಈ ಸಾಲಿನಲ್ಲಿ ಮೂರನೇಯ ಮಂಗಳಯಾನ ನೌಕೆಯಾಗಿದೆ. ಎಲ್ಲಾ ಮೂರು ನೌಕೆಗಳೂ 300 ಮಿಲಿಯನ್ ಮೈಲಿ (480 ಮಿಲಿಯನ್ ಕಿಲೋಮೀಟರ್) ಸಂಚರಿಸಿ ಫೆಬ್ರವರಿ ತಿಂಗಳ ವೇಳೆಗೆ ಮಂಗಳ ಗ್ರಹವನ್ನು ತಲುಪಲಿವೆ.

ಆರು ಚಕ್ರಗಳಾನ್ನು ಹೊಂದಿರುವ ಈ ರೋವರ್ ನ್ನು ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ತಯಾರಿಸಲಾಗಿದ್ದು ಮಂಗಳನ ಮೇಲ್ಮೈ ನಲ್ಲಿ ಲಭ್ಯವಾಗುವ ಘನ ಮಾದರಿಗಳನ್ನು ಕಳಿಸಿಕೊಡಲಿದೆ. ಇದು 2031 ರ ವೇಳೆಗೆ ಭೂಮಿಗೆ ಲಭ್ಯವಾಗಲಿವೆ. 

ಇದರ ಜೊತೆಗೆ ಮಂಗಳನ ಮೇಲೆ 'ಜೀವ'ಸಂಕುಲ ಅಸ್ತಿತ್ವದಲ್ಲಿತ್ತೇ? ಎಂಬ ಬಗ್ಗೆಯೂ ಸಂಶೋಧನೆ ನಡೆಯಲಿದೆ. ಮಂಗಳನ ಮೇಲ್ಮೈ ತಲುಪುವುದು ಕಠಿಣ ಪರಿಶ್ರಮದ ಕೆಲಸ ಅದಕ್ಕಾಗಿಯೇ ಈ ನೌಕೆಗೆ ನಾವು ಪರ್ಸೀವರೆನ್ಸ್ (Perseverance) ಎಂಬ ಹೆಸರನ್ನು ನಾಮಕರಣ ಮಾಡಿದ್ದೇವೆ ಎನ್ನುತ್ತಾರೆ ನಾಸಾದ ಅಡ್ಮಿನಿಸ್ಟ್ರೇಟರ್ ಜಿಮ್ ಬ್ರಿಡೆನ್‌ಸ್ಟೈನ್

ಈ ಹೆಸರನ್ನು ವರ್ಜಿನಿಯಾದ 13 ವರ್ಷದ ಬಾಲಕ ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಫೆ.18, 2021 ರ ವೇಳೆಗೆ ನೌಕೆ ಮಂಗಳ ಗ್ರಹದ ಮೇಲೆ ಇಳಿಯಲಿದೆ. ಮಾನವನ ಮಧ್ಯಪ್ರವೇಶ ಇಲ್ಲದೇ ಮಂಗಳನಲ್ಲಿ ಸ್ವಯಂಚಾಲಿತವಾಗಿ ಈ ನೌಕೆ ಇಳಿಯಲಿದ್ದು, 7 ನಿಮಿಷಗಳ ಅತ್ಯಂತ ಕಠಿಣ ಪ್ರಕ್ರಿಯೆ ಯಶಸ್ವಿಯಾದರೆ ಈ ಮಿಷನ್ ಸಾರ್ಥಕಗೊಳ್ಳಲಿದೆ. ಈ ನೌಕೆ 25 ಕ್ಯಾಮರಾಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com