ಪ್ಲೇಸ್ಟೋರ್ ನಲ್ಲಿ ಮಿತ್ರೋ ಆಪ್ ಮತ್ತೆ ಲಭ್ಯ: ಗೂಗಲ್ 

ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದೇಶಿ ನಿರ್ಮಿತ ಮಿತ್ರೋ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದೆ. 
ಪ್ಲೇಸ್ಟೋರ್ ನಲ್ಲಿ ಮಿತ್ರೋ ಆಪ್ ಮತ್ತೆ ಲಭ್ಯ: ಗೂಗಲ್
ಪ್ಲೇಸ್ಟೋರ್ ನಲ್ಲಿ ಮಿತ್ರೋ ಆಪ್ ಮತ್ತೆ ಲಭ್ಯ: ಗೂಗಲ್

ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದೇಶಿ ನಿರ್ಮಿತ ಮಿತ್ರೋ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದೆ. 

ಟೆಕ್ ದೈತ್ಯ ಗೂಗಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇತ್ತೀಚೆಗಷ್ಟೇ ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿತ್ತು. ಇದನ್ನು ಪುನಃ ಗೂಗಲ್ ಪ್ಲೇಸ್ಟೋರ್ ನಲ್ಲಿ ಸೇರಿಸಲಾಗುವುದು ಎಂದು ಆಂಡ್ರಾಯ್ಡ್ ಹಾಗೂ ಗೂಗಲ್ ಪ್ಲೇ ನ ಉಪಾಧ್ಯಕ್ಷ ಸಮೀರ್ ಸಮತ್ ಹೇಳಿದ್ದಾರೆ. 

ಮಿತ್ರೋ ಆ್ಯಪ್​​ ಗೆ ಸಂಬಂಧಿಸಿದಂತೆ ‘ ನಮ್ಮ ತಂಡ ಆ್ಯಪ್​​ ಡೆವಲಪರ್​​ ಜೊತೆಗೆ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ್ದೇವೆ, ಸಮಸ್ಯೆ ಬಗೆಹರಿದ ನಂತರ ಅಪ್ಲಿಕೇಶನ್​ ಅನ್ನು ಮತ್ತೆ ಸಲ್ಲಿಸಲು ಹೇಳಿದ್ದೇವೆ ಎಂದು ಸಮೀರ್ ಸಮತ್ ತಿಳಿಸಿದ್ದಾರೆ. 

ಇತ್ತೀಚೆಗೆ ಭಾರತದಲ್ಲಿ ಚೀನಾ ಆ್ಯಪ್​​ಗಳ ನಿಷೇಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿತ್ತು. ವಿಶೇಷವಾಗಿ ‘ಟಿಕ್​ಟಾಕ್‘ ಆ್ಯಪ್​​​ ನಿಷೇಧವಾಗಬೇಕೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅನೇಕರು ‘ಟಿಕ್​ಟಾಕ್‘​ ಅನ್​​ಇನ್​ಸ್ಟಾಲ್​ ಮಾಡಿದ್ದರು. ಈ ಬೆನ್ನಲ್ಲೇ ‘ಮಿತ್ರೋ ಆ್ಯಪ್‘​ ಜನಪ್ರಿಯಗೊಂಡಿತ್ತು. 

ಭಾರತದಲ್ಲಿ ಚೀನಾ ಆ್ಯಪ್​ ಬಳಕೆ ನಿಷೇಧ ಮಾಡಬೇಕೆಂಬ ಅಭಿಯಾನದ ಭಾಗವಾಗಿ ಜನ್ಮ ತಳೆದಿದ್ದ ‘ರಿಮೂವ್​ ಚೀನಾ ಆ್ಯಪ್ ಬಗ್ಗೆಯೂ ಗೂಗಲ್ ಪ್ರತಿಕ್ರಿಯೆ ನೀಡಿದ್ದು, ಭದ್ರತಾ ವಿಷಯವನ್ನು ಹೊರತುಪಡಿಸಿ, ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯ ಆ್ಯಪ್ ಗಳನ್ನು ಯಾವುದೇ ಮೊಬೈಲ್ ನಲ್ಲಿ ತೆಗೆದು ಹಾಕುವುದಕ್ಕೆ ಅಥವಾ ಬದಲಾವಣೆ ಮಾಡುವುದಕ್ಕೆ ಗೂಗಲ್ ಅನುಮತಿ ನೀಡುವುದಿಲ್ಲ, ಆದ್ದರಿಂದ ರಿಮೂವ್​ ಚೀನಾ ಆ್ಯಪ್ ನ್ನು ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಸಮೀರ್ ಸಮತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com