ಭೂಮಿಯ ಅತಿ ದೊಡ್ಡ, ಅತಿ ಹೆಚ್ಚು ತಾಪಮಾನದ ಜ್ವಾಲಾಮುಖಿ ಹವಾಯಿಯಲ್ಲಿ ಪತ್ತೆ

ಭೂಮಿಯ ಅತಿ ಡೊಡ್ಡ, ಅತಿ ಹೆಚ್ಚು ತಾಪಮಾನ ಹೊಂದಿರುವ ಜ್ವಾಲಾಮುಖಿ ಹವಾಯಿಯಲ್ಲಿ ಸಂಶೋಧಕರಿಗೆ ಪತ್ತೆಯಾಗಿದೆ.
ಭೂಮಿಯ ಅತಿ ದೊಡ್ಡ, ಅತಿ ಹೆಚ್ಚು ತಾಪಮಾನದ ಜ್ವಾಲಾಮುಖಿ
ಭೂಮಿಯ ಅತಿ ದೊಡ್ಡ, ಅತಿ ಹೆಚ್ಚು ತಾಪಮಾನದ ಜ್ವಾಲಾಮುಖಿ

ಭೂಮಿಯ ಅತಿ ಡೊಡ್ಡ, ಅತಿ ಹೆಚ್ಚು ತಾಪಮಾನ ಹೊಂದಿರುವ ಜ್ವಾಲಾಮುಖಿ ಹವಾಯಿಯಲ್ಲಿ ಸಂಶೋಧಕರಿಗೆ ಪತ್ತೆಯಾಗಿದೆ.

ಈ ಜ್ವಾಲಾಮುಖಿಗೆ ವಿಜ್ಞಾನಿಗಳು ಪುಹಾಹೋನು ಎಂಬ ನಾಮಕರಣ ಮಾಡಿದ್ದು, ಇತ್ತೀಚಿನ ವರೆಗೂ ಅತಿ ದೊಡ್ಡ ಜ್ವಾಲಾಮುಖಿಯಾಗಿದ್ದ ಮೌನಾ ಲೋವಾಗಿಂತ ದೊಡ್ಡದಾಗಿದ್ದು, 171 ಮೈಲಿಗಳಷ್ಟು ಉದ್ದ ಹಾಗೂ 56 ಮೈಲಿಗಳಷ್ಟು ಅಗಲವಿದೆ ಎನ್ನುತ್ತಿದ್ದಾರೆ.

ಸಾಗರ ತಳಭಾಗದಲ್ಲಿರುವ ಬಂಡೆಗಳ ರಾಸಾಯನಿಕ ಅಧ್ಯಯನಗಳನ್ನು ಸತತ ಸಂಶೋಧನೆಗೊಳಪಡಿಸಿದ ಬಳಿಕ ಸಂಶೋಧಕರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಹೊನಲುಲುವಿನಿಂದ 620 ಮೈಲಿಗಳಷ್ಟು ದೂರವಿರುವ ಪಾಪಾಹ್ನಾಮೊಕುಸ್ಕಿಯಾ ಸಾಗರ ರಾಷ್ಟ್ರೀಯ ಸ್ಮಾರಕದ ಬಳಿ ಪುಹಾಹೋನು ಜ್ವಾಲಾಮುಖಿಯನ್ನು ಪತ್ತೆ ಹಚ್ಚಲಾಗಿದ್ದು, ಅಂದಾಜು 3,092 ಡಿಗ್ರಿ ಫ್ಯಾರನ್‌ಹೀಟ್ ನಷ್ಟು ತಾಪಮಾನ ಹೊಂದಿದೆ. ಈ ಕುರಿತ ಅಧ್ಯಯನ ವರದಿ ಜರ್ನಲ್ ಅರ್ತ್, ಪ್ಲಾನೆಟರಿ ಸೈನ್ಸ್ ಲೆಟರ್ಸ್ ನಲ್ಲಿ ಪ್ರಕಟಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com