ಫೇಸ್ ಬುಕ್ ಕಂಟೆಂಟ್ ಮಾಡರೇಟರ್ ಗಳಿಂದ ದಿನವೊಂದಕ್ಕೆ ನಡೆಯುತ್ತವೆ 3 ಲಕ್ಷ ಪ್ರಮಾದಗಳು! 

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್ ಬುಕ್ ಸಂಸ್ಥೆ ಕಂಟೆಂಟ್ ವಿಚಾರವಾಗಿ ನಡೆಯುವ ಪ್ರಮಾದಗಳ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಬಹಿರಂಗಗೊಳಿಸಿದೆ. 
ಫೇಸ್ ಬುಕ್
ಫೇಸ್ ಬುಕ್

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್ ಬುಕ್ ಸಂಸ್ಥೆ ಕಂಟೆಂಟ್ ವಿಚಾರವಾಗಿ ನಡೆಯುವ ಪ್ರಮಾದಗಳ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಬಹಿರಂಗಗೊಳಿಸಿದೆ. 

ದಿನವೊಂದಕ್ಕೆ ಕಂಟೆಂಟ್ ಮಾಡರೇಟರ್ ಗಳಿಂದ 3 ಲಕ್ಷ ಪ್ರಮಾದಗಳು ನಡೆಯುತ್ತದೆ ಎಂಬುದನ್ನು ಸ್ವತಃ ಸಾಮಾಜಿಕ ಜಾಲತಾಣ ಸಂಸ್ಥೆ ಒಪ್ಪಿಕೊಂಡಿದೆ. ಯಾವುದು ಆನ್ ಲೈನ್ ನಲ್ಲಿ ಕಾಣಿಸಬೇಕು ಯಾವುದು ಕಾಣಿಸಬಾರದೆಂಬ ನಿರ್ಧಾರವನ್ನು ಕೈಗೊಳ್ಳಲು 15,000 ಕಂಟೆಂಟ್ ಮಾಡರೇಟರ್ ಗಳು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಗೆ ಕೆಲಸ ಮಾಡುತ್ತಿದ್ದು, 24 ಗಂಟೆಗಳಲ್ಲಿ 3 ಲಕ್ಷ ತಪ್ಪುಗಳು ನಡೆದಿರುತ್ತವೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸ್ಟರ್ನ್ ಸೆಂಟರ್ ಫಾರ್ ಬ್ಯುಸಿನೆಸ್ ಅಂಡ್ ಹ್ಯೂಮನ್ ರೈಟ್ಸ್ ವಿಭಾಗದ ವರದಿ ಮೂಲಕ ತಿಳಿಸಿದೆ. 

10 ಪ್ರಕರಣಗಳ ಪೈಕಿ ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಕಂಟೆಂಟ್ ಮಾಡರೇಟರ್ ಗಳು ತಪ್ಪು ಮಾಡುತ್ತಾರೆ. ಕಂಟೆಂಟ್ ಮಾಡರೇಟರ್ ಗಳ ಪೈಕಿ ಬಹುತೇಕ ಉದ್ಯೋಗಿಗಳು ಹೊರಗುತ್ತಿಗೆಯಿಂದ ಕೆಲಸ ಮಾಡುತ್ತಿದ್ದಾರೆ. ಸಂಶೋಧಕರ ಪ್ರಕಾರ ಫೇಸ್ ಬುಕ್ ಹೊರಗುತ್ತಿಗೆಯನ್ನು ಅಂತ್ಯಗೊಳಿಸಿ, ದಿನನಿತ್ಯದ ಆಧಾರದಲ್ಲಿ ಕಂಟೆಂಟ್ ಮಾಡರೇಟರ್ ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com