ಮಾನವ ಸಹಿತ ಬಾಹ್ಯಾಕಾಶಯಾನ: ಜಿಎಸ್ ಎಲ್ ವಿಯ ಮೊದಲ ಪರೀಕ್ಷಾರ್ಥ ಉಡಾವಣೆ ವಿಳಂಬ 

ಮಾನವ ಸಹಿತ ಬಾಹ್ಯಾಕಾಶಯಾನದ ಭಾಗವಾಗಿ ಈ ವರ್ಷ ಪರೀಕ್ಷಾರ್ಥವಾಗಿ ನಡೆಯಬೇಕಿದ್ದ ಜಿಎಸ್ ಎಲ್ ವಿ ರಾಕೆಟ್ ಉಡಾವಣೆ ಈ ವರ್ಷ ನಡೆಯುವುದಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾನವ ಸಹಿತ ಬಾಹ್ಯಾಕಾಶಯಾನದ ಭಾಗವಾಗಿ ಈ ವರ್ಷ ಪರೀಕ್ಷಾರ್ಥವಾಗಿ ನಡೆಯಬೇಕಿದ್ದ ಜಿಎಸ್ ಎಲ್ ವಿ ರಾಕೆಟ್ ಉಡಾವಣೆ ಈ ವರ್ಷ ನಡೆಯುವುದಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ. 

ಎರಡು ಪರೀಕ್ಷಾರ್ಥ ಉಡಾವಣೆಗಳ ಪೈಕಿ ಒಂದನ್ನು ಈ ವರ್ಷ ನಡೆಸಲು ಇಸ್ರೋ ಉದ್ದೇಶಿಸಿತ್ತು. "ಭಾರತದ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನ್ ಯಾನ್ ನ ಭಾಗವಾಗಿ ಈ ವರ್ಷ ನಡೆಯಬೇಕಿದ್ದ ಜಿಎಸ್ ಎಲ್ ವಿ ರಾಕೆಟ್ ನ ಪರೀಕ್ಷಾರ್ಥ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ ನಡೆದಿದ್ದ 70ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಶಿವನ್, ಭಾರತದ ಹ್ಯೂಮನ್ ಸ್ಪೇಸ್ ಫ್ಲೈಟ್ ಗಾಗಿ ಆರ್ಬಿಟಲ್ ಮಾಡ್ಯೂಲ್ ಸಿಸ್ಟಮ್ ಹಾಗೂ ಲಾಂಚ್ ವೆಹಿಕಲ್ ನ ವಿನ್ಯಾಸ ಹಾಗೂ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಮುಕ್ತಾಯಗೊಂಡಿವೆ ಇದರ ಪರೀಕ್ಷೆಗಳು ಇನ್ನಷ್ಟೇ ನಡೆಯಬೇಕಿದೆ ಎಂದು ಹೇಳಿದ್ದರು. 

ಇಸ್ರೋದ ಈ ಹಿಂದಿನ ಯೋಜನೆಯ ಪ್ರಕಾರ​, ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲಿ ಹ್ಯೂಮನಾಯ್ಡ್ ವ್ಯೋಮಮಿತ್ರವನ್ನು ಬಾಹ್ಯಾಕಾಶಕ್ಕೆ ಕಳಿಸಲು ಉದ್ದೇಶಿಸಲಾಗಿತ್ತು. ಈ ವಿಳಂಬಕ್ಕೆ ನಿರ್ದಿಷ್ಟ ಕಾರಣವನ್ನು ಇಸ್ರೋ ನೀಡಿಲ್ಲವಾದರೂ ಕೋವಿಡ್-19 ನಿಂದಾಗಿ ಈ ರೀತಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com