ಜಿಐ ಸ್ಯಾಟ್ ಉಪಗ್ರಹ ಉಡಾವಣೆ ತಾಂತ್ರಿಕ ಕಾರಣ ನೀಡಿ ಮುಂದೂಡಿದ ಇಸ್ರೋ
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಸಂಜೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಬೇಕಿದ್ದ ಜಿಯೋ ಇಮೇಜಿಂಗ್ ಉಪಗ್ರಹ ಜಿಐ ಸ್ಯಾಟ್ ೧ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ ಅಧಿಕೃತವಾಗಿ ತಿಳಿಸಿದೆ.
Published: 04th March 2020 04:56 PM | Last Updated: 04th March 2020 04:56 PM | A+A A-

ಸಂಗ್ರಹ ಚಿತ್ರ
ಚೆನ್ನೈ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಸಂಜೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಬೇಕಿದ್ದ ಜಿಯೋ ಇಮೇಜಿಂಗ್ ಉಪಗ್ರಹ ಜಿಐ ಸ್ಯಾಟ್ ೧ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ ಅಧಿಕೃತವಾಗಿ ತಿಳಿಸಿದೆ.
ಜಿಎಸ್ಎಲ್ ವಿ-ಎಫ್೧೦ ರಾಕೆಟ್ ಮೂಲಕ ಮಾರ್ಚ್ 5 ರಂದು ನಭಕ್ಕೆ ಕಳುಹಿಸಬೇಕಿದ್ದ ಜಿಯೋ ಇಮೇಜಿಂಗ್ ಉಪಗ್ರಹ ಜಿಐ ಸ್ಯಾಟ್-೧ ಅನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ ಎಂದು ಇಸ್ರೋ ಟ್ವೀಟ್ ನಲ್ಲಿ ತಿಳಿಸಿದೆ. ಪರಿಷ್ಕೃತ ಉಡಾವಣೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.
ಶ್ರೀ ಹರಿಕೋಟಾದಲ್ಲಿ ಬಾಹ್ಯಾಕಾಶ ನೆಲೆಯಲ್ಲಿ ಉಪಗ್ರಹ ಉಡಾವಣೆ ಪ್ರಕ್ರಿಯೆಗೆ 22 ಗಂಟೆಗಳ ಕ್ಷಣಗಣನೆ ಆರಂಭವಾಗುವುದಕ್ಕೆ ಅರ್ಧ ಗಂಟೆ ಮುಂಚೆ ಉಡಾವಣೆಯ ಕಾರ್ಯವನ್ನುಮುಂದೂಡಲು ನಿರ್ಧರಿಸಲಾಗಿದೆ. ಬುಧವಾರ ಸಂಜೆ 3.43 ಗಂಟೆಗೆ ಉಪಗ್ರಹ ಉಡಾವಣೆಯ ಕ್ಷಣ ಗಣನೆ ಆರಂಭವಾಗಬೇಕಿತ್ತು. ಜಿಎಸ್ಎಲ್ ವಿ-ಎಫ್೧೦ ರಾಕೆಟ್ 2,268 ಕೆಜಿ ತೂಕದ ಜಿ ಐ ಸ್ಯಾಟ್ ನಾಳೆ ಸಂಜೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣೆ ನಡೆಸಬೇಕಿತ್ತು.