ಕೊರೋನಾ ಸೋಂಕು ಅಂಟಿಸಿಕೊಳ್ಳದೇ ವೈರಸ್ ಹರಡುವ ಬಾವಲಿಗಳ ರೋಗನಿರೋಧಕ ಶಕ್ತಿ ಕುರಿತು ಸಂಶೋಧನೆ!

ಬಾವಲಿಗಳು ತಮ್ಮಲ್ಲಿನ ವೈರಸ್ ಗಳಿಂದ ಸೋಂಕು ತಗುಲಿಸಿಕೊಳ್ಳದೆ ಇತರೆ ಜೀವಿಗಳಿಗೆ ಸೋಂಕು ಪ್ರಸರಿಸುತ್ತಿವೆ ಎಂಬ ಅಚ್ಚರಿಯ ಅಂಶವನ್ನು ವಿಜ್ಞಾನಿಗಳು ಮನಗಂಡಿದ್ದು, ಬಾವಲಿಗಳಲ್ಲಿನ ಅದ್ಭುತ ರೋಗನಿರೋಧಕ ಶಕ್ತಿ ಕುರಿತು ಸಂಶೋಧನೆಗೆ ಮುಂದಾಗಿದ್ದಾರೆ.
ಬಾವಲಿ ಮತ್ತು ಕೋವಿಡ್-19
ಬಾವಲಿ ಮತ್ತು ಕೋವಿಡ್-19

ನವದೆಹಲಿ: ಬಾವಲಿಗಳು ಲಕ್ಷಾಂತರ ವೈರಸ್ ಗಳ ನೆಲೆ ಎಂಬ ವಿಚಾರ ಎಲ್ಲ ವಿಜ್ಞಾನಿಗಳಿಗೂ ತಿಳಿದಿದೆ. ಆದರೆ ಈ ಬಾವಲಿಗಳು ತಮ್ಮಲ್ಲಿನ ವೈರಸ್ ಗಳಿಂದ ಸೋಂಕು ತಗುಲಿಸಿಕೊಳ್ಳದೆ ಇತರೆ ಜೀವಿಗಳಿಗೆ ಸೋಂಕು ಪ್ರಸರಿಸುತ್ತಿವೆ ಎಂಬ ಅಚ್ಚರಿಯ ಅಂಶವನ್ನು ವಿಜ್ಞಾನಿಗಳು ಮನಗಂಡಿದ್ದು, ಬಾವಲಿಗಳಲ್ಲಿನ ಅದ್ಭುತ ರೋಗನಿರೋಧಕ ಶಕ್ತಿ ಕುರಿತು ಸಂಶೋಧನೆಗೆ ಮುಂದಾಗಿದ್ದಾರೆ.

ಹೌದು.. ಇಡೀ ವಿಶ್ವವನ್ನು ಪ್ರಾಣ ಭೀತಿಗೆ ಒಡ್ಡಿದ್ದ ಸಾರ್ಸ್ ಮತ್ತು ಕೊರೋನಾ ವೈರಸ್ ಗಳ ಆವಾಸ ಸ್ಥಾನವಾಗಿರುವ ಬಾವಲಿಗಳ ಮೇಲೆ ಸಂಶೋಧನೆ ಮುಂದುವರೆದಿದ್ದು, ವೈರಸ್ ಗಳ ಆವಾಸ ಸ್ಥಾನವಾಗಿದ್ದರೂ ಕೂಡ ಮಾರಕ ವೈರಸ್ ಬಾವಲಿಗಳ ಮೇಲೆ ಯಾವುದೇ ರೀತಿಯ ಹಾನಿ  ಮಾಡಿಲ್ಲ. ಹಾಗಾದರೆ ಮಾರಕ ವೈರಸ್ ನಿಂದ ಬಾವಲಿಗಳನ್ನು ರಕ್ಷಿಸುತ್ತಿರುವ ಆ ಶಕ್ತಿ ಯಾವುದು.. ಬಾವಲಿಗಳಲ್ಲಿನ ರೋಗ ನಿರೋಧಕ ಶಕ್ತಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಕುತೂಹಲಕಾರಿ ಅಂಶದ ಮೇಲೆ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.

ಕೆನಡಾ ಮೂಲದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯ ಇಂತಹುದೊಂದು ಸಾಹಸಕ್ಕೆ ಕೈಹಾಕಿದ್ದು, ಈ ಸಾಹಸದ ಸಂಶೋಧನೆಗೆ ವಿಕ್ರಮ್ ಮಿಶ್ರಾ ನೇತೃತ್ವದ ಭಾರತೀಯ ಮೂಲದ ವಿಜ್ಞಾನಿಗಳು ಕೂಡ ಕೈ ಜೋಡಿಸಿದ್ದು, ಮಧ್ಯಪ್ರಾಚ್ಯ ಉಸಿರಾಟದ ಖಾಯಿಲೆ (MERS) ಮತ್ತು ಕೋವಿಡ್  -19 ವೈರಸ್ ಮತ್ತು ಸಾರ್ಸ್-CoV-2 ವೈರಸ್ ಗಳ ಆವಾಸ ಸ್ಥಾನವಾಗಿರುವ ಬಾವಲಿಗಳ ಮೇಲೆ ಸಂಶೋಧನೆ ಆರಂಭಿಸಿದ್ದಾರೆ.

ಬಾವಲಿಗಳಲ್ಲಿನ ರೋಗ ನಿರೋಧಕ ಶಕ್ತಿಗೆ ಏನು ಕಾರಣ? ಈ ರೋಗ ನಿರೋಧಕ ಶಕ್ತಿಯಲ್ಲಿನ ಅಂಶಗಳನ್ನು ಮಾನವನಿಗೆ ಅಳವಡಿಸಿದರೆ ಕೊರೋನಾ ವೈರಸ್ ಸಾಯುತ್ತದೆಯೇ ಅಥವಾ ತಟಸ್ಥವಾಗುತ್ತದೆಯೇ ಎಂಬಿತ್ಯಾದಿ ಅಂಶಗಳ ಮೇಲೆ ಸಂಶೋಧನೆ ನಡೆಯಲಿದೆ. 

MERS, ಕೋವಿಡ್-19, ಸಾರ್ಸ್ ವೈರಸ್ ಗಳು ಮಾನವನ ಜೀವಕೋಶಗಳ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಆದರೆ ಇದೇ ವೈರಸ್ ಗಳಿಂದ ಬಾವಲಿಗಳ ಜೀವಕೋಶಗಳು ಹೇಗೆ ರಕ್ಷಿಸಿಕೊಳ್ಳಲ್ಪಡುತ್ತಿವೆ. ವೈರಸ್ ಗಳು ಜೀವಕೋಶಗಳನ್ನು ಹಾಳುಮಾಡದಂತೆ ಅದಾವ ಅದ್ಭುತ  ರೋಗ ನಿರೋಧಕ ಶಕ್ತಿ ತಡೆಯುತ್ತಿದೆ ಎಂಬ ಸಂಶೋಧನೆಯನ್ನು ವಿಜ್ಞಾನಿಗಳು ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com