ಹೊಸವಿಧದ ಶಿಲೀಂಧ್ರ ಪತ್ತೆಗೆ ಸಹಕಾರಿಯಾಯ್ತು ಟ್ವಿಟರ್!

ಸಾಮಾಜಿಕ ಜಾಲತಾಣವೆಂದರೆ ಕೇವಲ ಮನರಂಜನೆ, ಹಗುರವಾದ ವಿಷಯಗಳು ಒಂದಷ್ಟು ವಿಡಿಯೋ, ಫೋಟೊಗಳಿಗೆ ಹೆಚ್ಚು ಸೀಮಿತವಾಗಿವೆ ಎಂಬ ಅಭಿಪ್ರಾಯವಿದೆ. ಆದರೆ ಟ್ವಿಟರ್ ನಿಂದ ವಿಜ್ಞಾನಿಗಳು ಹೊಸವಿಧದ ಶಿಲೀಂಧ್ರ ಪತ್ತೆ ಮಾಡಿದ್ದಾರೆ ಎಂಬುದು ಹೊಸ ವಿಷಯ! 

ಜರ್ನಲ್ ಮೈಕೊಕೀಸ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಪರಾವಲಂಬಿ ಶಿಲೀಂಧ್ರಯ ಹೊಸ ಪ್ರಭೇದ ಟ್ವಿಟರ್ ಮೂಲಕ ಪತ್ತೆಯಾಗಿದೆ 

ಮಿಲಿಪೆಡ್ (ಸಾವಿರ ಕಾಲುಗಳುಳ್ಳ ಕೀಟ) ನ ಫೋಟೊವನ್ನು ಟ್ವಿಟರ್ ನಲ್ಲಿ ನೋಡುತ್ತಿದ್ದಾಗ, ಆ ಜೀವಿಯ ತಲೆಯ ಭಾಗದಲ್ಲಿ ಸಣ್ಣ ಚುಕ್ಕೆಗಳಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಅಮೆರಿಕದ ಮಿಲಿಪೆಡ್ ಗಳಲ್ಲಿ ಈ ರೀತಿಯ ಚುಕ್ಕೆಗಳು ಕಂಡುಬರುವುದಿಲ್ಲ 

ಟ್ವಿಟರ್ ನಲ್ಲಿ ಕಂಡುಬಂದ ಈ ಮಿಲಿಪೆಡ್ ನ ಚಿತ್ರವನ್ನು ನನ್ನ ಸಹೋದ್ಯೋಗಿಗೆ ತೋರಿಸಿದೆ. ನಂತರ ಸಂಗ್ರಹಾಲಯದ ಕಲೆಕ್ಷನ್ ಗಳನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸಲಾಯಿತು. ಈ ವೇಳೆ ಪತ್ತೆಯಾದ ಹೊಸ ಪ್ರಭೇದದ ಶಿಲೀಂಧ್ರಕ್ಕೆ ಟ್ರೊಗ್ಲೊಡೈಟ್ಸ್ ಟ್ವಿಟರ್ ಎಂಬ ಹೆಸರಿಡಲಾಗಿದೆ ಎಂದು ಡೆನ್ ಮಾರ್ಕ್ ನ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಅನಾ ಸೋಫಿಯಾ ರೆಬೋಲೆರಾ ತಿಳಿಸಿದ್ದಾರೆ. 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com