ಆಕಾಶದಲ್ಲಿ ಚಂದ್ರನ ಪಕ್ಕದಲ್ಲಿ ಸಂಧಿಸಲಿವೆ ಗುರು-ಶನಿ ಗ್ರಹಗಳು: ಅಪರೂಪದ ಕೌತುಕ ನೋಡಲು ಮರೆಯದಿರಿ 

ನಭೋಮಂಡಲ ಇಂದು ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಇಂದು ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ. 

Published: 21st November 2020 10:55 AM  |   Last Updated: 21st November 2020 12:32 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನಭೋಮಂಡಲ ಇಂದು ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಇಂದು ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ. 

ಯಾವುದೇ ಮೂರು ವಸ್ತುಗಳು ಸಂಯೋಜಿಸಿ ತ್ರಿಕೋನ ರಚಿಸಬಹುದು. ಆದರೆ ಈ ಮೂರು ಗ್ರಹಗಳ ಸಂಯೋಜನೆ ನೋಡುಗರನ್ನು ಕಣ್ಮನ ಸೆಳೆಯುವುದರಲ್ಲಿ, ವಿಜ್ಞಾನಿಗಳನ್ನು ಮತ್ತಷ್ಟು ಚಿಂತನೆಗೆ, ಅಧ್ಯಯನಕ್ಕೆ ಒರಗೆ ಹಚ್ಚುವುದರಲ್ಲಿ ಸಂಶಯವಿಲ್ಲ. 

ನಿನ್ನೆ ಆಕಾಶದಲ್ಲಿ ಗುರು ಮತ್ತು ಚಂದ್ರರು ಸಂಯೋಜಿಸಿದ್ದವು. ಅದು ಶನಿ ಮತ್ತು ಚಂದ್ರ ಒಟ್ಟಿಗೆ ಬರುವ ಕೆಲವೇ ಗಂಟೆಗಳ ಮುನ್ನವಾಗಿತ್ತು. ನಿನ್ನೆ ಮತ್ತು ಮೊನ್ನೆ ಈ ಅಪರೂಪದ ವಿದ್ಯಮಾನಗಳು ನಡೆದಿದ್ದರೆ ಇಂದು ಮೂರೂ ಗ್ರಹಗಳು ಸಂಯೋಜಿಸಿ ತ್ರಿಕೋನ ರಚಿಸಲಿವೆ. 

ಸೂರ್ಯ ಮಸುಕಾಗುತ್ತಿದ್ದಂತೆ ಗುರು ಮತ್ತು ಶನಿ ದಕ್ಷಿಣ-ನೈರುತ್ಯದಲ್ಲಿ ಗೋಚರಿಸುತ್ತದೆ. ಸ್ಥಳೀಯ ಸಮಯ ರಾತ್ರಿ 8: 30 ರ ನಂತರ ಮಾತ್ರ ಅವು ಉಳಿಯುತ್ತವೆ. ಗುರುವು ರಾತ್ರಿ 8:38 ಕ್ಕೆ, ಮತ್ತು ಶನಿ ರಾತ್ರಿ 8:57 ಕ್ಕೆ ಇಳಿಯುತ್ತಾನೆ. 

ನಮ್ಮ ಸೌರವ್ಯೂಹದ ಎರಡು ದೊಡ್ಡ ಗ್ರಹಗಳು ಪ್ರತಿ 20 ವರ್ಷಗಳಿಗೊಮ್ಮೆ ಸಂಧಿಸುತ್ತಿದ್ದು, ಇಂದು ಶೇಕಡಾ 0.1ರಷ್ಟು ಮಾತ್ರ ಕಾಣಿಸಲಿದೆ. 

ಇಂದು ಸಾಯಂಕಾಲ ಸೂರ್ಯಾಸ್ತಮಾನವಾದ ನಂತರ 30 ನಿಮಿಷಗಳ ಕಾಲ ಚೆನ್ನಾಗಿ ಕಾಣಲು ಸಿಗುತ್ತದೆ. ಎರಡು ಗಂಟೆಗಳ ಕಾಲ ಆಕಾಶದಲ್ಲಿ ಕಾಣಬಹುದು ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp