ಸೋಮವಾರ ವರ್ಷದ 4ನೇ ಮತ್ತು ಕೊನೆಯ ಚಂದ್ರಗ್ರಹಣ

ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ನಾಳೆ (ಸೋಮವಾರ) ಸಂಭವಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ನಾಳೆ (ಸೋಮವಾರ) ಸಂಭವಿಸಲಿದೆ.

ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ ಮತ್ತು ನೈಸರ್ಗಿಕ ಉಪಗ್ರಹವು ಭೂಮಿಯ ಹೊರಛಾಯೆಯ ಮೂಲಕ ಹಾದು ಹೋಗಲಿದೆ. ಆಸ್ಟ್ರೇಲಿಯಾ, ಏಷ್ಯಾ, ಪೆಸಿಫಿಕ್, ಯುರೋಪ್, ಅಟ್ಲಾಂಟಿಕ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೇರಿಕಾದಲ್ಲಿ ಚಂದ್ರಗ್ರಹಣ  ಗೋಚರಿಸಲಿದೆಯಾದರೂ ಇದು ಹವಾಮಾನದ ಮೇಲೆ ಪ್ರಮುಖವಾಗಿ ಅವಲಂಭಿತವಾಗಿರುತ್ತದೆ, ಮಂಜು ಮತ್ತು ಮೋಡಕವಿದ ವಾತಾವರಣ ಗ್ರಹಣ ಗೋಚರತೆಗೆ ಅಡ್ಡಿಯಾಗಬಹುದು ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. 

ಗ್ರಹಣದ ಸಮಯ
ಈ ಚಂದ್ರಗ್ರಹಣವನ್ನು ಛಾಯಾ ಚಂದ್ರಗ್ರಹಣ, ಪೆನಂಬ್ರಲ್‌ ಚಂದ್ರಗ್ರಹಣ ಹಾಗೂ ರಾಹುಗ್ರಸ್ತ ಚಂದ್ರಗ್ರಹಣ ಎಂದು ಕರೆಯುತ್ತಾರೆ. ನಾಳೆ ಮಧ್ಯಾಹ್ನ 1.02ಕ್ಕೆ ಗ್ರಹಣ ಆರಂಭವಾಗಲಿದ್ದು, ಸಂಜೆ 5.20 ಗ್ರಹಣ ಅಂತ್ಯ.ವಾಗಲಿದೆ. ಮಧ್ಯಾಹ್ನ 3.12ನಿಮಿಷಕ್ಕೆ ಗ್ರಹಣ ಉತ್ತುಂಗ  ಸ್ಥಿತಿಯಲ್ಲಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ, 
 
ಎಲ್ಲೆಲ್ಲಿ ಗೋಚರ
ಈ ಚಂದ್ರಗ್ರಹಣ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ಗೋಚರವಾಗಲಿದೆ. ಆದರೆ ಈ ಚಂದ್ರಗ್ರಹಣ ಗೋಚರವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತದೆ. ಹೀಗಾಗಿ ನಮ್ಮಲ್ಲಿ ಚಂದ್ರಗ್ರಹಣ ಆಚರಣೆಯ ಅವಶ್ಯಕತೆ ಇಲ್ಲ. ಆದರೆ ಗ್ರಹಣದ  ಪ್ರಭಾವ ಮಾತ್ರ ಇದ್ದೇ ಇರುತ್ತೆ ಎಂದು ತಜ್ಞರು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com