ಸೂಪರ್ ಸಾನಿಕ್ ಕ್ಷಿಪಣಿ
ಸೂಪರ್ ಸಾನಿಕ್ ಕ್ಷಿಪಣಿ

ಟಾರ್ಪಿಡೊ ಬಿಡುಗಡೆಗೆ ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಮುಖ ತಾಂತ್ರಿಕ ಪ್ರಗತಿಯಲ್ಲಿ ಒಡಿಶಾ ಕರಾವಳಿ ತೀರದ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ  ಭಾರತವು ಮೊದಲ ಬಾರಿಗೆ ಟಾರ್ಪಿಡೊ ಬಿಡುಗಡೆ (ಸ್ಮಾರ್ಟ್ ) ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಭುವನೇಶ್ವರ: ಪ್ರಮುಖ ತಾಂತ್ರಿಕ ಪ್ರಗತಿಯಲ್ಲಿ ಒಡಿಶಾ ಕರಾವಳಿ ತೀರದ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ  ಭಾರತವು ಮೊದಲ ಬಾರಿಗೆ ಟಾರ್ಪಿಡೊ ಬಿಡುಗಡೆ (ಸ್ಮಾರ್ಟ್ ) ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಡಿಆರ್ ಡಿ ಒ ಅಭಿವೃದ್ಧಿಪಡಿಸಿರುವ ಸ್ಮಾರ್ಟ್, ಜಲಾಂತರ್ಗಾಮಿ  ಯುದ್ಧ ವಿರೋಧಿ ಕಾರ್ಯಾಚರಣೆಗಾಗಿ  ಕ್ಷಿಪಣಿ ನೆರವಿನಿಂದ ಬಿಡುಗಡೆಯಾಗುವ ಹಗುರವಾದ ಟಾರ್ಪಿಡೊ ವ್ಯವಸ್ಥೆಯಾಗಿದೆ.ಈ ಕ್ಷಿಪಣಿ ಉಡಾವಣೆಯಿಂದ ಜಲಾಂತರ್ಗಾಮಿ ವಿರೋಧಿ ಯುದ್ಧದ ಸಾಮರ್ಥ್ಯಗಳನ್ನು ಭಾರತ ಪ್ರದರ್ಶಿಸಿತು.

ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಬೆಳಗ್ಗೆ 11-45ರಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ. ಎತ್ತರದವರೆಗಿನ ಕ್ಷಿಪಣಿ ಹಾರಾಟ, ಸೋನ್ ಕೋನ್  ಬೇರ್ಪಡಿಸುವಿಕೆ, ಟಾರ್ಪಿಡೊ ಬಿಡುಗಡೆ ಮತ್ತು ವೇಗ ಕಡಿತ ಕಾರ್ಯವಿಧಾನ ನಿಯೋಜನೆ ಸೇರಿದಂತೆ ಎಲ್ಲಾ ಸರಿಯಾಗಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ದೇಶ ಇತ್ತೀಚಿಗೆ ಅಭಿವೃದ್ದಿಪಡಿಸಿರುವ ಕ್ಷಿಪಣಿ ತಂತ್ರಜ್ಞಾನಗಳಲ್ಲಿ ಇದೊಂದು ಪ್ರಮುಖವಾಗಿದೆ. ಸ್ಮಾರ್ಟ್ ಗೇಮ್ ಚೇಂಜರ್ ಆಗಿದೆ ಎಂದು ಡಿಆರ್ ಡಿಒ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಸ್ಮಾರ್ಟ್ ಒಂದು ಹೈಬ್ರಿಡ್ ಕ್ಷಿಪಣಿಯಾಗಿದ್ದು ಅದು ಎರಡು ವಿಭಿನ್ನ ಶಸ್ತ್ರಾಸ್ತ್ರ ವ್ಯವಸ್ಥೆಗಳ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ. ಅದನ್ನು ವೇಗವಾಗಿ ಮತ್ತು ರಹಸ್ಯವಾಗಿ ಮಾಡುತ್ತದೆ. ಇದರೊಂದಿಗೆ, ಭಾರತವು ಹೆಚ್ಚಿನ ಶ್ರೇಣಿಯನ್ನು ಹೊಂದಿರುವ ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರವನ್ನು ಪಡೆದುಕೊಂಡಿದೆ. ಪ್ರಪಂಚದಲ್ಲಿ ಲಭ್ಯವಿರುವ ದೀರ್ಘ ಶ್ರೇಣಿಯ ಟಾರ್ಪಿಡೊ ಸುಮಾರು 50 ಕಿ.ಮೀ ಮತ್ತು ರಾಕೆಟ್ ನೆರವಿನ ಟಾರ್ಪಿಡೊಗಳು 150 ಕಿ.ಮೀ ವ್ಯಾಪ್ತಿಯಲ್ಲಿ ಚಲಿಸಬಹುದಾದರೂ, ಸ್ಮಾರ್ಟ್ 600 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ.

ಮಹತ್ವದ ಸಾಧನೆಗಾಗಿ ಡಿಆರ್‌ಡಿಒ ವಿಜ್ಞಾನಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. "ಜಲಾಂತರ್ಗಾಮಿ ವಿರೋಧಿ ಯುದ್ಧದಲ್ಲಿ ಉತ್ತಮ ಸಾಮರ್ಥ್ಯ ಬಲಪಡಿಸುವಲ್ಲಿ ಇದು ಪ್ರಮುಖ ತಂತ್ರಜ್ಞಾನದ ಪ್ರಗತಿಯಾಗಿದೆ" ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com