ನವೆಂಬರ್ ನಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಕೆಟ್ ಉಡಾವಣೆಗೆ ಇಸ್ರೋ ಯೋಜನೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಯಾರಿಸಿರುವ ಹೊಸ ರಾಕೆಟ್ ನ್ನು ನವೆಂಬರ್ 2020 ರ ವೇಳೆಗೆ ಉಡಾವಣೆ ಮಾಡಲು ಯೋಜನೆ ರೂಪಿಸಿದೆ. 
ಇಸ್ರೋ
ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಯಾರಿಸಿರುವ ಹೊಸ ರಾಕೆಟ್ ನ್ನು ನವೆಂಬರ್ 2020 ರ ವೇಳೆಗೆ ಉಡಾವಣೆ ಮಾಡಲು ಯೋಜನೆ ರೂಪಿಸಿದೆ. 

ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್ ವಿ) ನ್ನು ಉಡಾವಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ರಾಕೆಟ್ ನ ಅತಿ ದೊಡ್ಡ ಮೋಟಾರು-ಬೂಸ್ಟರ್ ಮೋಟರ್ ನ್ನು ನವೆಂಬರ್ ತಿಂಗಳಲ್ಲಿ ಪರೀಕ್ಷೆ ಮಾಡಲಾಗುವುದು ಎಂದು ಇಸ್ರೋ ಅಧಿಕಾರಿ ತಿಳಿಸಿದ್ದಾರೆ.

ಶ್ರೀಹರಿಕೋಟಾದ ರಾಕೆಟ್ ಪೋರ್ಟ್ ನ ಲಾಂಚ್ ಪ್ಯಾಡ್ ಸೆಟಪ್ ನ್ನು ಎಸ್ಎಸ್ ಎಲ್ ವಿಗೆ ಅನುಗುಣವಾಗಿ ಬದಲಾವಣೆ ಮಾಡಲಾಗುತ್ತದೆ ಎಂದು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ ಸಿ)ಯ ನಿರ್ದೇಶಕ ಎಸ್ ಸೋಮನಾಥ್ ಹೇಳಿದ್ದಾರೆ.

ನವೆಂಬರ್ ತಿಂಗಳಲ್ಲಿ ಪಿಎಸ್ಎಲ್ ವಿ ಸಿ49 ಮೂಲಕ 10 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಈ ರಾಕೆಟ್ ಭಾರತದ RISAT-2BR2 ಹಾಗೂ ಇತರ ವಾಣಿಜ್ಯ ಉದ್ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. 34 ಮೀಟರ್ ಇರಲಿರುವ ಎಸ್ಎಸ್ಎಲ್ ವಿ ರಾಕೆಟ್ 120 ಟನ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.  ವಿವಿಧ ಆರ್ಬಿಟ್ ಗಳಲ್ಲಿ ಬಹು ಉಪಗ್ರಹ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. 

ಲೋ ಅರ್ತ್ ಆರ್ಬಿಟ್ (ಎಲ್ಇಒ) ಗೆ 500 ಕೆಜಿ ಪೇಲೋಡ್ ಹಾಗೂ ಸೂರ್ಯ-ಸಿಂಕ್ರೊನಸ್ ಕಕ್ಷೆಗೆ (ಎಸ್ಎಸ್0) 300 ಕೆಜಿ ಪೇಲೋಡ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com