ಕೃತಕ ಬುದ್ಧಿಮತ್ತೆ ಬಳಸಿ ಟ್ವೀಟ್ ಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತಿಳಿಸಲು ಸಾಧ್ಯ!
ಈಗಿನ ಕಾಲದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ, ಓದಿನತ್ತ ಹೆಚ್ಚು ಗಮನ ಹರಿಸುವುದಿಲ್ಲ ಎಂಬ ಆರೋಪ ಕೇಳಿಬರುವುದು ಸಾಮಾನ್ಯ. ಆದರೆ ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ತಿಳಿಯುವುದಕ್ಕೆ ಇದೇ ಸಾಮಾಜಿಕ ಜಾಲತಾಣ ಸಹಕಾರಿಯಾಗಬಲ್ಲದು!
Published: 26th October 2020 05:59 PM | Last Updated: 26th October 2020 06:09 PM | A+A A-

ಟ್ವೀಟ್ ಗಳ ಆಧಾರದಲ್ಲಿ ಶೈಕ್ಷಣಿಕ ಪ್ರಗತಿ ತಿಳಿಸಲಿರುವ ಕೃತಕ ಬುದ್ಧಿಮತ್ತೆ!
ನವದೆಹಲಿ: ಈಗಿನ ಕಾಲದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ, ಓದಿನತ್ತ ಹೆಚ್ಚು ಗಮನ ಹರಿಸುವುದಿಲ್ಲ ಎಂಬ ಆರೋಪ ಕೇಳಿಬರುವುದು ಸಾಮಾನ್ಯ. ಆದರೆ ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ತಿಳಿಯುವುದಕ್ಕೆ ಇದೇ ಸಾಮಾಜಿಕ ಜಾಲತಾಣ ಸಹಕಾರಿಯಾಗಬಲ್ಲದು!
ಇದೇನಪ್ಪ!!? ಅಂತ ಹುಬ್ಬೇರಿಸಬೇಡಿ, ಕೃತಕ ಬುದ್ಧಿಮತ್ತೆಯ ಮೂಲಕ ನಿಮ್ಮ ಮಗು ಶಿಕ್ಷಣದಲ್ಲಿ ಯಾವ ಮಟ್ಟದ ಪ್ರಗತಿ ಸಾಧಿಸಿದ ಎಂಬುದನ್ನು ಅಳೆಯುವುದಕ್ಕೆ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳನ್ನೇ ಆಧಾರವಾಗಿರಿಸಿಕೊಳ್ಳುವ ತಂತ್ರಜ್ಞಾನವನ್ನು ರಷ್ಯಾದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲಾ ಪೋಸ್ಟ್ ಗಳನ್ನು ಹಾಕುತ್ತಾರೆ ಎಂಬುದರ ಆಧಾರದಲ್ಲಿ ಶೈಕ್ಷಣಿಕ ಪ್ರಗತಿಯನ್ನೂ ಅಳೆಯಲಾಗುತ್ತದೆ. ಮ್ಯಾಥಮೆಟಕಲ್ ಟೆಕ್ಚ್ಯುಯಲ್ ಅನಾಲಿಸಿಸ್ ನ್ನು ಬಳಸಿಕೊಂಡು ಪೋಸ್ಟ್ ಗಳಲ್ಲಿನ ಶಬ್ದಕೋಶಗಳನ್ನು ದಾಖಲಿಸಿ, ಪ್ರತಿಯೊಂದು ಪದ, ಚಿಹ್ನೆ, ಪೋಸ್ಟ್ ನ ಉದ್ದ ಹಾಗೂ ಪದಗಳ ರಚನೆಯನ್ನು ವಿಶ್ಲೇಷಿಸಿ ಮಕ್ಕಳ ಬುದ್ಧಿವಂತಿಕೆ ಹಾಗೂ ಪ್ರಗತಿಯನ್ನು ಅಂದಾಜಿಸಬಹುದಾಗಿದೆ.
ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿಷಯಗಳು, ಆಂಗ್ಲ ಪದ ಹಾಗೂ ಶಬ್ದಗಳು ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಯುಳ್ಳಾ ಪೋಸ್ಟ್ ಗಳಿದ್ದರೆ ಆ ಮಗು/ ವಿದ್ಯಾರ್ಥಿ ಶಿಕ್ಷಣದಲ್ಲಿ ಪ್ರಗತಿ ಹೊಂದಿದೆ ಎಂದು ನಿರ್ಧರಿಸಲಾಗುತ್ತದೆ ಎಂದು ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಆಫ್ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ ಮಾಸ್ಕೋದ ಸಂಶೋಧಕರಾದ ಇವಾನ್ ಸ್ಮಿರ್ನೋವ್ ಹೇಳಿದ್ದಾರೆ.
ರಷ್ಯಾದ 42 ಪ್ರದೇಶಗಳಲ್ಲಿ 4,400 ವಿದ್ಯಾರ್ಥಿಗಳ ವೃತ್ತಿ ಭವಿಷ್ಯವನ್ನು ಈ ವಿಧಾನದ ಮೂಲಕ ಅಂದಾಜಿಸುವ ಪ್ರಯತ್ನ ಮಾಡಲಾಗಿದೆ.