ಅಪರೂಪದ ಘಟನೆ: ಅಕ್ಟೋಬರ್ 31 ರಂದು 'ಬ್ಲೂ ಮೂನ್' ದರ್ಶನ

ಚಂದ್ರನ ಕಂಡರೆ ಅದೇನೋ ಎಲ್ಲರಿಗೂ ತೀರದ ಕುತೂಹಲ, ಅರಿತಷ್ಟೂ ಇನ್ನಷ್ಟು ಅರಿಯಬೇಕು ಎಂಬ ಆಸೆ ವಿಜ್ಞಾನಿಗಳದ್ದು.
ಅಪರೂಪದ ಘಟನೆ: ಅ.31 ರಂದು ಬ್ಲೂಮೂನ್ ದರ್ಶನ
ಅಪರೂಪದ ಘಟನೆ: ಅ.31 ರಂದು ಬ್ಲೂಮೂನ್ ದರ್ಶನ

ಚಂದ್ರನ ಕಂಡರೆ ಅದೇನೋ ಎಲ್ಲರಿಗೂ ತೀರದ ಕುತೂಹಲ, ಅರಿತಷ್ಟೂ ಇನ್ನಷ್ಟು ಅರಿಯಬೇಕು ಎಂಬ ಆಸೆ ವಿಜ್ಞಾನಿಗಳದ್ದು..

ಇಂತಹ ಅಪರೂಪದ ಚಂದ್ರನ ದರ್ಶನ (ಬ್ಲೂ ಮೂನ್) ಅ.31 ರಂದು ಆಗಲಿದೆ. ಬ್ಲೂ ಮೂನ್ ಅಂದಾಕ್ಷಣ  ಚಂದ್ರ ನೀಲಿ ಬಣ್ಣದಲ್ಲಿ ಕಾಣಿಸುತ್ತಾನೆ ಎಂದು ಅರ್ಥವಲ್ಲ. ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರ ಎರಡನೇ ಹುಣ್ಣಿಮೆಯಂದು ಕಾಣಿಸುವುದಕ್ಕೆ ಬ್ಲೂ ಮೂನ್ ಎನ್ನುತ್ತಾರೆ. ಇದು ಬರುವುದು ತುಂಬಾ ವಿರಳ. ಅ.1 ರಂದು ಕಾಣಿಸಿದ್ದ ಹುಣ್ಣಿಮೆ ಚಂದ್ರ ಈಗ ಅ.31 ರಂದು ಕಾಣಿಸಿಕೊಳ್ಳುತ್ತಿದೆ. 

2007 ರ ಜೂನ್ ತಿಂಗಳಲ್ಲಿ ಈ ರೀತಿಯ ಬ್ಲೂ ಮೂನ್ ಕಾಣಿಸಿಕೊಂಡಿತ್ತು, ಮುಂದಿನ ಬ್ಲೂಮೂನ್ 2050 ರ ಸೆ.30 ರಂದು ಕಾಣಸಿಗುತ್ತದೆ. 2018 ರಲ್ಲಿ ಎರಡು ಬ್ಲೂ ಮೂನ್ ಗಳು ಕಾಣಿಸಿಕೊಂಡಿತ್ತು, ಜ.31 ರಂದು ಹಾಗೂ ಮಾ.31 ರಂದು ಬ್ಲೂ ಮೂನ್ ಕಾಣಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com