ಚೀನಾ ಪಬ್'ಜಿಗೆ ಸಡ್ಡು ಹೊಡೆದ ನಟ ಅಕ್ಷಯ್: ಫೌ-ಜಿ ಆ್ಯಪ್ ಅಭಿವೃದ್ಧಿ

ಚೀನಾದ ಪಬ್'ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್'ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

Published: 05th September 2020 08:44 AM  |   Last Updated: 05th September 2020 08:44 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ಚೀನಾದ ಪಬ್'ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್'ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಆ್ಯಪ್'ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ. ಎಫ್ಎಯು; ಜಿ (ಫಿಯರ್ ಲೆಸ್ ಆ್ಯಂಡ್ ಯುನೈಟೆಡ್; ಗಾರ್ಡ್ಸ್) ಹೆಸರಿನ ಈ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

ಪಬ್ ಜಿ ರೀತಿ ಇಬ್ಬರಿಗಿಂದ ಹೆಚ್ಚಿನ ಜನರು ಆಡಬಹುದಾಗಿದ್ದು, ಈ ಆಟವನ್ನು ಭಾರತೀಯ ಭದ್ರತಾಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ. ಇದೇ ವೇಳೆ ಫೌ-ಜಿ ಆ್ಯಪ್ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್, ಆತ್ಮನಿರ್ಭರ ಭಾರತ ಅಭಿಯಾನವನ್ನು ಬೆಂಬಲಿಸುವ ಆ್ಯಕ್ಷನ್ ಗೇಮ್ ಫೌ-ಜಿಯನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ಈ ಆ್ಯಪ್'ನಿಂದ ದೊರೆಯುವ ಶೇ.20 ರಷ್ಟು ಆದಾಯವನ್ನು ಭಾರತ್ ವೀರ್ ಟ್ರಸ್ಟ್'ಗೆ ನೀಡಲಾಗುವುದು ಎಂದು ಹೇಳಿದ್ದಾರೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp